ಮಡಿಕೇರಿ ನ.27 NEWS DESK : ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ವತಿಯಿಂದ 39 ನೇ ಆವೖತ್ತಿಯ ಸತ್ಯ ಕೂಗ್೯ ತ್ರಿಕೋನ ಗಾಲ್ಫ್ ಚಾಂಪಿಯನ್ ಶಿಪ್ ಪಂದ್ಯಾವಳಿ ಆಯೋಜಿಸಲ್ಪಟ್ಟಿತ್ತು. ಮಡಿಕೇಯ ಮಕೇ೯ರಾ ಡೌನ್ಸ್ ಗಾಲ್ಫ್ ಕೋಸ್೯, ಬಿಟ್ಟಂಗಾಲದ ಕೂಗ್೯ ಗಾಲ್ಫ್ ಲಿಂಕ್ ಮತ್ತು ಪಾಲಿಬೆಟ್ಟದಲ್ಲಿನ ಟಾಟಾ ಕಾಫಿ ಗಾಲ್ಪ್ ಕೋಸ್೯ಗಳಲ್ಲಿ ಮೂರು ದಿನಗಳು ಆಯೋಜಿತ ಗಾಲ್ಫ್ ಪಂದ್ಯಾವಳಿಗಳಲ್ಲಿ ವಿವಿಧೆಡೆಗಳ 110 ಗಾಲ್ಫ್ ಆಟಗಾರರು ಪಾಲ್ಗೊಂಡಿದ್ದರು. ಎಲ್ಲಾ ವಿಭಾಗಗಳಲ್ಲಿ ವರುಣ್ ಗಣಪತಿ ವಿಜೇತರಾಗಿ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಮಾಲಿ ಶಶಿಕಿರಣ್ ದ್ವಿತೀಯ ಸ್ಥಾನ ಪಡೆದರು. ವಿವಿಧ ವಿಭಾಗಗಳಲ್ಲಿ ಅಖಿಲ್ ಮುತ್ತಣ್ಣ, ಫೆಯಾಜ್ ಮೂಸಕುಟ್ಟಿ, ಬಿ.ಎ.ಗಣಪತಿ, ಸತ್ಯನಾರಾಯಣ ಹೆಚ್.ಎಲ್. ಗ್ರೂಪ್ ಕ್ಯಾಪ್ಟನ್ ಮೂತಿ೯, ಐ.ಕೆ. ಅನಿಲ್, ಐ.ಕೆ. ಪೊನ್ನಪ್ಪ, ಕೆ.ಯು. ವಿಕ್ತಾಂತ್, ಕೆ.ಪಿ. ರಂಜಿತ್, ಚನ್ನರಾಜ ಮಹೀಂದ್ರ, ಬಿ.ಎಂ. ನಾಚಪ್ಪ, ಎಂ.ಎಂ. ಪ್ರದೀಪ್ ಕುಮಾರ್ ದಾಸ್, ಎಂ.ಎ.ರಮೇಶ್, ಬೋಪಣ್ಣ, ಪಿ.ಕೆ. ಅಮೖತ್ ಪೂವಣ್ಣ, ಅಖಿಲ್ ಮುತ್ತಣ್ಣ, ಪ್ರಥ್ವಿ ಡಿಸೋಜಾ, ಜೈದೀಪ್, ಟಿ.ಕೆ. ಸತ್ಯಪ್ರಸಾದ್, ಆರ್. ಬಿ.ಸಿ. ನಾಯರ್, ಹಷ೯ ದೇಶಪಾಂಡೆ, ಶುಧೀರ್ ರಂಗಸ್ವಾಮಿ ವಿಜೇತರಾದರು. ಮಹಿಳಾ ವಿಭಾಗದಲ್ಲಿ ಆಲಿಶಾ ತಿಮ್ಮಯ್ಯ ಪ್ರಥಮ ಮತ್ತು ಚಂದ್ರಿಕಾ ದ್ವಿತೀಯ ಸ್ಥಾನ ಪಡೆದರು. ಸ್ಪಧಾ೯ ವಿಜೇತರಿಗೆ ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ನ ಕ್ಯಾಪ್ಟನ್ ಮುತ್ತಣ್ಣ ಕಾಯ೯ಪ್ಪ, ಪಂದ್ಯಾವಳಿಯ ಪ್ರಾಯೋಜಕರಾದ ಟಿ.ಕೆ. ಸತ್ಯಪ್ರಸಾದ್, ಗೌರವ ಕಾಯ೯ದಶಿ೯ ಎಂ.ಎ.ಪೂಣಚ್ಚ, ಖಜಾಂಚಿ ಪಿ.ಕೆ. ಬೋಪಣ್ಣ , ಪಂದ್ಯಾವಳಿ ಆಯೋಜನಾ ಸಮಿತಿ ಅಧ್ಯಕ್ಷ ರಾಯ್ ಚಂಗಪ್ಪ ಟ್ಟೋಫಿ ವಿತರಿಸಿದರು. ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ನ ಆಡಳಿತ ಮಂಡಳಿ ಪದಾಧಿಕಾರಿಗಳು, ನಿದೇ೯ಶಕರು ಹಾಜರಿದ್ದರು.











