ವಿರಾಜಪೇಟೆ ನ.27 NEWS DESK : ವಿರಾಜಪೇಟೆ ವಿವೇಕ ಜಾಗ್ರತ ಬಳಗದ ವತಿಯಿಂದ ನ.30 ರಂದು ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮ ಸಭಾಂಗಣದಲ್ಲಿ ಓದುಗರ ಸಮಾವೇಶವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಓದುಗರ ಸಮಾವೇಶ ನಡೆಯಲಿದೆ. ಹಾಗಾಗಿ ಸಮಸ್ತ ಆಸಕ್ತರು ಆಗಮಿಸಿ ಆಧ್ಯಾತ್ಮಿಕ ವಿಚಾರವನ್ನು ಸವಿಯ ಬೇಕೆಂದು ಬಳಗದ ಅಧ್ಯಕ್ಷ ರಾಜಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










