ಮಡಿಕೇರಿ ನ.28 NEWS DESK : ಕಾಂತೂರು-ಮೂರ್ನಾಡು , ಹೊದ್ದೂರು ಪಂಚಾಯಿತಿ , ಕಂದಾಯ ಇಲಾಖೆಯ ನೇತೃತ್ವದಲ್ಲಿ ಬೃಂದಾವನ ಆಸ್ಪತ್ರೆ ಮೈಸೂರು ಸಹಯೋಗದಲ್ಲಿ ಮೂರ್ನಾಡುವಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಮೂರ್ನಾಡುವಿನ ಪಿ.ಎಂ ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಬಿರದಲ್ಲಿ 200ಕ್ಕು ಹೆಚ್ಚು ಸಾರ್ವಜನಿಕರು ಪಾಲ್ಗೊಂಡು ಉಚಿತವಾಗಿ ಬಿಪಿ, ಶುಗರ್, ನೇತ್ರ, ಮೂಳೆ, ಕೀಲು , ನರರೋಗ, ಕಿವಿ ಮೂಗು, ಗಂಟಲು ತಪಾಸಣೆ,ಸ್ತ್ರೀರೋಗ ತಜ್ಞರಿಂದ ತಪಾಸಣೆ ಮಾಡಿಸಿಕೊಂಡು ಔಷಧಿಯನ್ನು ಪಡೆದರು. ಹಿರಿಯ ತಜ್ಞರಿಂದ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣೆ ನಡೆಸಲಾಯಿತು. ಮೈಸೂರು ಬೃಂದಾವನ ಆಸ್ಪತ್ರೆಯ ನಿರ್ದೇಶಕರಾದ ಡಾ.ಮಾತಂಡ ಆರ್.ಅಯ್ಯಪ್ಪ ಶಿಬಿರವನ್ನು ಉದ್ಘಾಟಿಸಿ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು. ವೈದ್ಯರಾದ ಡಾ.ಮನೋರಂಜಿನಿ, ಡಾ.ಶ್ರೇಯಸ್, ಡಾ.ಅಂಕಿತ , ಸಿಬ್ಬಂದಿಗಳಾದ ಪಿ.ಆರ್.ಓ ಗುರುರಾಜ್ ಹಾಗೂ ಮುರುಳಿ, ಆಸ್ಪತ್ರೆಯ ಸ್ಟಾಫ್ ನರ್ಸ್ ಗಳು, ಡಾ.ಅಗರ್ವಾಲ್ ಹೈ ಹಾಸ್ಪಿಟಲ್ ಮೈಸೂರು ಸಿಬ್ಬಂದಿಗಳು, ಮೂರ್ನಾಡು ಪಂಚಾಯಿತಿ ಅಧ್ಯಕ್ಷರಾದ ಕುಶನ್, ಉಪಾಧ್ಯಕ್ಷೆ ದಿವ್ಯ, ಪಂಚಾಯಿತಿ ಸದಸ್ಯರು, ಪಿ.ಡಿ.ಓ ಚಂದ್ರಮೌಳಿ , ಹೊದ್ದೂರು ಪಂಚಾಯಿತಿ ಅಧ್ಯಕ್ಷರಾದ ಹಂಸ, ಪಿಡಿಓ ವತ್ಸಲ, ಶಾಲೆಯ ದೈಹಿಕ ಶಿಕ್ಷಕಿ ಪ್ರೇಮಲತಾ ಶೆಟ್ಟಿ, ಗ್ರಾಮ ಆಡಳಿತ ಅಧಿಕಾರಿಗಳಾದ ಅಕ್ಷತಾ ಶೆಟ್ಟಿ ಹಾಗೂ ಸಂತೋಷ್ ಪಾಟೀಲ್ ಹಾಜರಿದ್ದರು.











