ನಾಪೋಕ್ಲು ನ.28 NEWS DESK : ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಸಾಧಕ ಮಕ್ಕಳ ಪೋಷಕರು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಿದರು. ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅವರ ಅಧ್ಯಕ್ಷತೆಯಲ್ಲಿ ನಾಪೋಕ್ಲುವಿನ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಸನ್ಮಾನ ಕಾರ್ಯಕ್ರಮದಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕ ಪಡೆದು ವೈದ್ಯಕೀಯ ಶಿಕ್ಷಣದಲ್ಲಿ ಸರ್ಕಾರಿ ಸೀಟು ಪಡೆದ ವಿದ್ಯಾರ್ಥಿಗಳಾದ ಎಂ.ಎಂ.ಶಮ ಇವರ ಪೋಷಕರಾದ ಡೆಕ್ಕನ್ ಯೂತ್ ಕ್ಲಬ್ ಮಾಜಿ ಅಧ್ಯಕ್ಷರು, ಜೆಡಿಎಸ್ ವಕ್ತರ ಎಂ.ಎ.ಮನ್ಸೂರ್ ಆಲಿ ಹಾಗೂ ಹಫೀಯ ಫಾತಿಮಾ ಪೋಷಕರಾದ ಹುಸೇನ್ ಮತ್ತು ವಿರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶನ್ ಆಗಿ ಕಾರ್ಯನಿರ್ವಹಿಸುತ್ತಿರುವ ಇಂದಿರ ನಗರದ ನಿವಾಸಿ ಪಿ.ಜಿ ಸುಬ್ರಮಣಿ ಅವರನ್ನು ಡೆಕ್ಕನ್ ಯೂತ್ ಕ್ಲಬ್ ಪರವಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹಂಸ ಕೊಟ್ಟಮುಡಿ, ವಿಎಸ್‍ಎಸ್‍ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ನಾಪೋಕ್ಲು ಪಂಚಾಯತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಎ.ಇಸ್ಮಾಯಿಲ್, ಪಿ.ಎಂ.ಯುನೆಸ್, ಪಿ.ಎಂ.ರಶೀದ್, ಅರಫತ್, ಸಿರಾಜುದ್ದೀನ್ ಚೆರಿಯಪರಂಬು, ಆದಿಲ್, ಸಿ.ಹೆಚ್.ಅಹ್ಮದ್, ಹಾರೀಸ್, ಆಸ್ಕರ್, ಆಸಿಫ್, ಪಿ.ಎಂ.ರಶೀದ್, ಮಹಮ್ಮದ್ ಅಲಿ, ಸಿ.ಹೆಚ್.ಅಹಮ್ಮದ್, ಉಪ ಅಧ್ಯಕ್ಷ ಸಂಶು ಕಾರೆಕ್ಕಾಡ್, ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು, ಕ್ರೀಡಾ ಪ್ರೇಮಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.











