ಮಡಿಕೇರಿ ಡಿ.3 NEWS DESK : ಪೊನ್ನಂಪೇಟೆ ತಾಲ್ಲೂಕಿನ ಹೈಸೊಡ್ಲೂರು ಗ್ರಾಮದ ಮಾದೇಶ್ವರ ದೇವಸ್ಥಾನದಿಂದ ಐಗುಂದ ಎಸ್ಟೇಟ್ ವರೆಗಿನ ಪೂರ್ಣಗೊಂಡಿರುವ 11 ಕೆವಿ ವಿದ್ಯುತ್ ಮಾರ್ಗದ ರೀ ರೂಟಿಂಗ್ ಹಾಗೂ ರೀ ಕಂಡಕ್ಟರಿಂಗ್ ರೂ 14.71ಲಕ್ಷ ರೂ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಪ್ರಮುಖವಾಗಿ ಕೃಷಿ ಅವಲಂಬಿತ ಕೊಡಗಿನ ಜನತೆಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಕ್ಷೇತ್ರದಾದ್ಯಂತ ಇಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ರೈತರ ಕಡೆಯಿಂದ ಮೆಚ್ಚುಗೆಯ ಸಂದೇಶಗಳು ಬರುತ್ತಿವೆ. ನಾಡಿನ ರೈತರ ಹಾಗೂ ವಿದ್ಯುತ್ ಬಳಕೆದಾರರ ಹಿತ ದೃಷ್ಟಿಯಿಂದ ಈ ಯೋಜನೆ ತಂದಿದ್ದು ಇದರ ಸದುಪಯೋಗವನ್ನು ನಾಡಿನ ಜನತೆ ಪಡೆದುಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು.
ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಹಿರಿಯರು ಮುಕಳೆರ ಕುಶಾಲಪ್ಪ, ಪೆಮ್ಮಂಡ ಪೊನ್ನಪ್ಪ, ಸುಧೀರ್, ಅಜ್ಜಿಕುಟ್ಟಿರ ಗಿರೀಶ್, ಪಮು, ಸುರೇಂದ್ರ, ಯೋಗೇಶ್, ರಂಜು ,ಶಿವು ನಾಚಪ್ಪ, ರೋನಿ ,ಉದಯ, ಹಾಗೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಸುವ ಸಲುವಾಗಿ ಶಾಸಕರು ರಾಜ್ಯ ಸರ್ಕಾರದಿಂದ ವಿಶೇಷ ಅನುದಾನವನ್ನು ಒದಗಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.











