ಮಡಿಕೇರಿ ಡಿ.3 NEWS DESK : ಪೊನ್ನಂಪೇಟೆ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಮಲ್ಲಗೆರೆ ಶ್ರೀ ಮಾರಮ್ಮ ಹಾಗೂ ಶ್ರೀ ಈಶ್ವರ ದೇವಾಲಯದ ಮುಖ್ಯ ಹೆಬ್ಬಾಗಿಲನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದಶಾಸಕರು, ಅತ್ಯಂತ ಸುಂದರ ಹಾಗೂ ಸಾವಿರಾರು ಭಕ್ತರು ಆಗಮಿಸುವ ಈ ದೇವಸ್ಥಾನಕ್ಕೆ ನೂತನ ಹೆಬ್ಬಾಗಿಲು ಮತ್ತಷ್ಟು ಮೆರಗು ನೀಡುತ್ತದೆ ಎಂದು ಬಣ್ಣಿಸಿದರು. ಶ್ರೀ ದೇವರು ಭಕ್ತಾದಿಗಳ ಇಷ್ಟಾರ್ಥ ಈಡೇರಿಸಿ ನಾಡಿಗೆ ಸುಖ, ಸಂತೋಷ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರು ರಮೇಶ್, ಪಂಚಾಯಿತಿ ಸದಸ್ಯರು ಬೋಪಣ್ಣ, ದಾನಿಗಳು ಜೀವನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಹಿರಿಯರು ಪೆಮ್ಮಂಡ ಪೊನ್ನಪ್ಪ, ಪಕ್ಷದ ಮುಖಂಡರು ಮುಕಟೀರ ಸಂದೀಪ್, ವಿನು ಉತ್ತಪ್ಪ, ಮನು, ಸಿದ್ದು ನಾಚಪ್ಪ, ನಿಖಿಲ್ ಸೋಮಣ್ಣ, ಅಜ್ಜಿಕುಟ್ಟಿರ ಪೊನ್ನು, ಪಮು, ಅಣ್ಣಳ್ಳಮಾಡ ಹರೀಶ್, ಅಂಟೋನಿ, ಚೆಕೇರ ಸುಧೀರ್, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು. ಈ ಹೆಬ್ಬಾಗಿಲು ನಿರ್ಮಾಣಕ್ಕೆ ಶಾಸಕರು ತಮ್ಮ ವಿಶೇಷ ಅನುದಾನದ ₹ 3 ಲಕ್ಷಗಳನ್ನೂ ಹಾಗೂ 1.69ಲಕ್ಷವನ್ನು ದಾನಿಗಳು ರಾಧಾ ಪೂವಯ್ಯ, ಜೀವನ್ ಒದಗಿಸಿದರು.











