ಮಡಿಕೇರಿ ಡಿ.3 NEWS DESK : ಉಡೋತ್‍ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6 ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ. ಡಿ.6 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು, ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ. ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9900931278, 9591304757, 9483399077 ಸಂಪರ್ಕಿಸಬಹುದಾಗಿದೆ.











