ಸೋಮವಾರಪೇಟೆ ಡಿ.4 NEWS DESK : ಆಲೂರುಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ಡಿ.6 ರಂದು ಲಕ್ಷದೀಪೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಮಠಾಧಿಪತಿಗಳಾದ ಶ್ರೀ.ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕಾರ್ತಿಕ ಮಾಸದಲ್ಲಿ ಕ್ಷೇತ್ರದ ದೇವರುಗಳಾದ ವೀರಭದ್ರೇಶ್ವರ,ತಪೋವನೇಶ್ವರಿ,ಗುರುಸಿದ್ಧವೀರೇಶ್ವರ ಹಾಗೂ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನಡೆದಿದ್ದು ಇದೀಗ ಲಕ್ಷದೀಪೋತ್ಸವದ ಅಂಗವಾಗಿ ಪ್ರತಿನಿತ್ಯ ಅರ್ಚನೆ, ಅಭಿಷೇಕಗಳು ನಡೆಯುತ್ತಿವೆ ಎಂದು ತಿಳಿಸಿದ ಅವರು ಡಿ.6 ರ ಶನಿವಾರ ಲಕ್ಷದೀಪೋತ್ಸವದ ಅಂಗವಾಗಿ ವಿಶೇಷ ಪೂಜೆಗಳೊಂದಿಗೆ ರಾತ್ರಿ 8 ಗಂಟೆಗೆ ಸ್ವಾಮಿಯ ಉತ್ಸವ ನಡೆಯಲಿದೆ ಎಂದರು. ಸಂಜೆ 6 ಗಂಟೆಗೆ ಮಠದ ಆವರಣದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ, ಕಾರ್ಯಕ್ರಮದಲ್ಲಿ ದೀಪೋತ್ಸವಕ್ಕೆ ಚಾಲನೆ ಹಾಗೂ ಕ್ಷೇತ್ರದ 2026ನೆ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುವುದು, ನಾಡಿನ ಹರಗುರು ಚರ್ಮೂರ್ತಿಗಳ ಸಾನಿಧ್ಯದಲ್ಲಿ,ವಿವಿಧ ಜನಪ್ರತಿನಿಧಿಗಳು,ಸಾಧಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಹಾಂತ ಸ್ವಾಮೀಜಿ ಹೇಳಿದ್ದಾರೆ.











