ಮಡಿಕೇರಿ ಡಿ.4 NEWS DESK : ಮದೆ ಗ್ರಾಮದ ಅವಂದುೂರಿನ ಪುರಾತನ ಹಾಗೂ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪುನರ್ ನಿರ್ಮಾಣಗೊಳ್ಳುತ್ತಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ಕಾಮಗಾರಿ ಪರಿಶೀಲಿಸಿದರು. ಬಳಿಕ ದೇವಸ್ಥಾನ ಸಮಿತಿಯವರ ಸನ್ಮಾನ ಸ್ವೀಕರಿಸಿದ ಶಾಸಕರು, ತಮ್ಮ ವೈಯುಕ್ತಿಕ ಧನಸಹಾಯವಾಗಿ 1 ಲಕ್ಷದ ಕೊಡುಗೆಯನ್ನು ನೀಡಿದರು. ದೇವಸ್ಥಾನದವರ ಮನವಿಗೆ ಸ್ಪಂದಿಸಿದ ಶಾಸಕರು, ಸರಕಾರದ ಕಡೆಯಿಂದ ದೇವಸ್ಥಾನ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಪ್ರಮುಖರಾದ ಕೊಲ್ಯದ ಗಿರಿಶ್, ಬಗರ್ ಹುಕುಂ ಸದಸ್ಯರಾದ ಕೇಟೋಳಿ ಮೋಹನ್ ರಾಜ್, ಪಟ್ಟಡ ದೀಪಕ್, ಕಾವೇರಮ್ಮನ ಕುಮಾರ್, ಸೂರಜ್ ಹೊಸೂರು ಮೊದಲಾದವರು ಉಪಸ್ಥಿತರಿದ್ದರು.











