ಮಡಿಕೇರಿ ಡಿ.5 NEWS DESK : ನಗರದ ಸುದರ್ಶನ ವೃತ್ತದ ಸರಕಾರಿ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಮಾತನಾಡಿದ ಶಾಸಕರು ಮಡಿಕೇರಿ ನಗರ ಸಭೆಯ ಅಧ್ಯಕ್ಷರು ಮತ್ತು ಸದಸ್ಯರ ಒಮ್ಮತದ ಸಹಕಾರದಿಂದ ನಗರದಲ್ಲಿ ಹಲವಾರು ವರ್ಷಗಳ ಬೇಡಿಕೆ ಇದ್ದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ಕಾಲ ಈಗ ಕೂಡಿ ಬಂದಿದೆ. ಸುಮಾರು 40 ಲಕ್ಷ ಅನುದಾನ, ಬಳಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಯ ಅಂಬೇಡ್ಕರ್ ನೆನಪಿನ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ. ಈ ಕಾಮಗಾರಿಯನ್ನು 4-5 ತಿಂಗಳಲ್ಲಿ ಸಮಿತಿ ಸದಸ್ಯರು ಗಮನಹರಿಸಿ ಮುಗಿಸಬೇಕು, ಶಾಸಕರ ನಿಧಿಯಿಂದ ಇನ್ನು ಹೆಚ್ಚಿನ ಅನುದಾನ ಕೊಡಲು ನಾನು ಪ್ರಯತ್ನಿಸುವುದಾಗಿ ತಿಳಿಸಿದರು. ಕಾಮಗಾರಿ ಮುಗಿದ ನಂತರ ಜಿಲ್ಲೆಯ ಎಲ್ಲಾ ಸಂಘಟನೆಗಳನ್ನು ಸೇರಿಸಿಕೊಂಡು ದೊಡ್ಡಮಟ್ಟದಲ್ಲಿ ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಳ್ಳುವ ಬಗ್ಗೆ ಕ್ರಮ ವಹಿಸುತ್ತೇನೆ. ಎಲ್ಲರು ಸಹಕಾರ ನೀಡುವಂತೆ ಕೋರಿದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಾತನಾಡಿ ಅಂಬೇಡ್ಕರ್ ಅವರ ಬರಹ ಹಾಗೂ ಭಾಷಣಗಳ ಅಧ್ಯಯನ ಮಾಡಬೇಕು. ಅಂಬೇಡ್ಕರ್ ಅವರ ಅಧ್ಯಯನ ಮತ್ತು ದೂರದೃಷ್ಟಿಯನ್ನು ತಿಳಿಯುವಂತಾಗಬೇಕು ಎಂದರು. ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಆಸ್ತಿಯಾಗಿದ್ದು, ಅವರು ರಾಷ್ಟ್ರಕ್ಕೆ ನೀಡಿರುವ ಕಾನೂನು, ಸಂವಿಧಾನ, ಕಾರ್ಮಿಕರು ಮತ್ತು ಮಹಿಳೆಯರಿಗೆ ನೀಡಿರುವ ಹಕ್ಕುಗಳ ಕೊಡುಗೆ ಅಪಾರ ಎಂದು ವರ್ಣಿಸಿದರು. ಈ ಸಂದರ್ಭ ನಗರಸಭೆ ಸದಸ್ಯರಾದ ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ, ಕೆ.ಎಸ್.ರಮೇಶ್, ಎಸ್.ಸಿ.ಸತೀಶ್, ಚಿತ್ರಾವತಿ, ಉಮೇಶ್ ಸುಬ್ರಮಣಿ, ಅಮಿನ್ ಮೊಹಿಸಿನ್, ಮಂಜುಳಾ, ಉಷಾ ಕಾವೇರಪ್ಪ, ಚಂದ್ರಶೇಖರ, ಶಾರದ ನಾಗರಾಜು, ಜಗದೀಶ್, ಜುಲೇಕಾಬಿ, ಮುತ್ತು ರಾಜ್, ಚಂದ್ರಶೇಖರ್, ಸದಾಮುದ್ದಪ್ಪ, ಅಹಿಂದ ಒಕ್ಕೂಟದ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಜಯಪ್ಪ ಹಾನಗಲ್ಲು, ಪ್ರಧಾನ ಕಾರ್ಯದರ್ಶಿ ಸಿ.ಜೆ.ಮೋಹನ್ ಮೌರ್ಯ, ಸಮಿತಿಯ ಗೌರವಾಧ್ಯಕ್ಷ ಹೆಚ್.ಎಲ್.ದಿವಾಕರ್, ಸದಸ್ಯರಾದ ಗಾಯತ್ರಿ ನರಸಿಂಹ, ಎಸ್.ಸಿ.ಸತೀಶ್, ಸಮಿತಿಯ ಮಾಧ್ಯಮ ವಕ್ತಾರ ವಿನಯ್, ಉಪಾಧ್ಯಕ್ಷ ದಿಲೀಪ್ ಕುಮಾರ್ ಹಾಗೂ ಖಜಾಂಚಿ ಪ್ರೇಮ ಕೃಷ್ಣಪ್ಪ, ಪ್ರಮುಖರಾದ ಬೇಕಲ್ ರಮನಾಥ್, ಡಿ.ಸಿ.ನಿರ್ವಾಣಪ್ಪ, ಬಿ.ಜೆ.ಪಿ.ಮಾಜಿ ಅಧ್ಯಕ್ಷ ಭಾರತೀಶ್, ವೀರಭದ್ರಯ್ಯ, ಈರಪ್ಪ, ಕೂಡಿಗೆ ಅಣ್ಣಯ್ಯ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ಎಂಜಿನಿಯರ್ ಗಳಾದ ಪ್ರಮೋದ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಇತರರರು ಇದ್ದರು. ಕುಶಾಲನಗರದ ಲೋಕೇಶ್ ಮತ್ತು ತಂಡದವರು ಅಂಬೇಡ್ಕರ್ ಕುರಿತು ಹಾಡು ಹಾಡಿದರು. ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪನೆಯಾಗಲಿದೆ. ಅಂದಾಜು 2 ರಿಂದ 3 ಸೆಂಟ್ಸ್ ಜಾಗದಲ್ಲಿ ಸುಮಾರು 44 ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮತ್ತು ಉದ್ಯಾನವನ ನಿರ್ಮಾಣವಾಗಲಿದೆ.











