ಸುಂಟಿಕೊಪ್ಪ ಡಿ.5 NEWS DESK : ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಲೆ ಮತ್ತು ಶಿಕ್ಷಕರ ಜವಾಬ್ದಾರಿ ಬಹುದೊಡ್ಡದಿದ್ದು, ಪೋಷಕರು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತವರಣವನ್ನು ತಮ್ಮ ಕುಟುಂಬಗಳಲ್ಲಿ ಒದಗಿಸಿದಲ್ಲಿ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವೆಂದು ವಂ.ಗುರುಗಳಾದ ವಿಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಶಾಲಾವರಣದಲ್ಲಿ ಮಕ್ಕಳ ಕವಾಯತ್ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿ ಮಾತನಾಡಿದ ಅವರು, ಪೋಷಕರು ಮಕ್ಕಳನ್ನು ಒಮ್ಮೆ ಶಾಲೆಗೆ ಸೇರಿಸಿ ಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂಬ ಭಾವನೆಯನ್ನು ಹೊಂದಿರ ಬಾರದು. ಬದಲಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದೆಂದು ವಂ.ಗುರುಗಳಾದ ವಿಜಯಕುಮಾರ್ ಹೇಳಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ ತಾವು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಶಾಲೆಯಲ್ಲಿ ನೀಡಿದ ಶಿಕ್ಷಣವು ತನ್ನನ್ನು ಸುಂಟಿಕೊಪ್ಪದ ಪ್ರಥಮ ಪ್ರಜೆಯನ್ನಾಗಿ ರೂಪಿಸಿದೆ ಎಂದು ಭಾವುಕರಾಗಿ ನುಡಿದರು. ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ಕೃಷ್ಣಪ್ಪ ಅವರು ಮಾತನಾಡಿ, ಸಂತ ಅಂತೋಣಿ ಶಾಲೆಯು ತನ್ನ ಅತ್ಯುತ್ತಮ ಶಿಕ್ಷಣ ನೀಡುವಿಕೆಗೆ ಹೆಸರಾಗಿದೆ. ಇಲ್ಲಿ ಕಲಿತ ಮಕ್ಕಳು ವಿಶ್ವದದ್ಯಾಂತ ಅತ್ಯುತ್ತಮ ಜೀವನವನ್ನು ರೂಪಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ ದುರಾದೃಷ್ಟವಶತ್ ಎಲ್ಲಾ ಖಾಸಗಿ ಶಾಲೆಗಳಲ್ಲಿ ಪ್ರವೇಶಾವಕಾಶ ದೊರೆಯದ ಮಕ್ಕಳು ಸರಕಾರಿ ಶಾಲೆಗಳಿಗೆ ಬರುವ ಪ್ರವೃತ್ತಿಯನ್ನು ನಾವು ನೋಡುತ್ತಿದ್ದೇವೆ. ಸಿಬ್ಬಂದಿ ಕೊರತೆ, ಖಾಯಂ ಶಿಕ್ಷಕರ ನೇಮಕಾತಿ ಕೊರತೆ ಮೊದಲಾದ ಸಮಸ್ಯೆಗಳ ನಡುವೆಯೂ ಸಂತ ಅಂತೋಣಿ ಶಾಲೆಯು ತನ್ನ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಂ.ಭ.ಫಿಲೋಮೆನ್ ನೊರೋನ್ಹಾ, ಶಾಲೆಯಲ್ಲಿ ಮೌಲ್ಯಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮಕ್ಕಳನ್ನು ಸಮಾಜದ ಬಹುದೊಡ್ಡ ಆಸ್ತಿಯನ್ನಾಗಿ ರೂಪಿಸಬೇಕು. ಇಂದು ಮೊಬೈಲ್ ಸಂಸ್ಕøತಿ ಹಳ್ಳಿ ಮಕ್ಕಳನ್ನು ಅವರಿಸಿದೆ. ಅವರನ್ನು ಮೊಬೈಲ್ ಗಿಳಿನಿಂದ ಬಿಡಿಸಿ ಪುಸ್ತಕಗಳನ್ನು ಇಡಿಸಿ ಒಳಿತು ಕೆಡುಕುಗಳ ವ್ಯತ್ಯಾಸ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಯು.ರಫೀಕ್‍ಖಾನ್, ಕೊಡಗು ಜಿಲ್ಲಾ ಸ್ಕೌಟ್-ಗೈಡ್ ಜಿಲ್ಲಾ ಆಯುಕ್ತರಾದ ಬೇಬಿ ಮಾಥ್ಯು, ಶಾಲೆಯ ಹಳೆ ವಿದ್ಯಾರ್ಥಿ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಸಹಕಾರ ಸಂಘ ಅಧ್ಯಕ್ಷ ಜೆರ್ಮಿ ಡಿಸೋಜ, ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ. ರಕ್ಷಿತ್ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡಿರುವ ಶಿಕ್ಷಕಿ ಮುತ್ತಮ್ಮ ಹಾಗೂ ಉತ್ತಮ ಶಾಲಾ ಮುಖ್ಯೋಪಾದ್ಯಾಯಮಿ ಪ್ರಶಸ್ತಿಗೆ ಭಾಜನರಾದ ಶಾಲಾ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೋವಿಟಾವಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ವಂ.ಭ. ಜೆಸ್ಸಿಂತ ಪಿರೇರಾ,ವಂ.ಭ. ಬಿಂದು ಎಲಿಜಬೆತ್, ಕೊಡಗು ಜಿಲ್ಲಾ ಬುಲ್ಸ್ ಬುಲ್ಸ್ ಆಯುಕ್ತ ಎಂ.ಡೈಸಿ, ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ.ಹೀನಾ, ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕರಾದ ವಂ.ಭ.ಜೆಸ್ಸಿ ವೇಗಸ್, ಶಾಲಾಮುಖ್ಯೋಪಾದ್ಯಾಯನಿ ಸಿಸ್ಟರ್ ಜೋವಿಟಾವಾಸ್, ಪ್ರೀತಿ ಜಾಯ್ಸ್ ಕುಟೀನಾ, ಯಿವಾಬೆನ್ಸಿಸ್ ಸೇರಿದಂತೆ ಶಿಕ್ಷಕರು ಇದ್ದರು.











