
ನಾಪೋಕ್ಲು ಡಿ.12 NEWS DESK : ಬಲ್ಲಮಾವಟಿ ಶ್ರೀ ಭಗವತಿ ದೇವಾಲಯದ ಗರ್ಭಗುಡಿ ಹಾಗೂ ಮುಖ ಮಂಟಪ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಶಡಾಧಾರ ಪೂಜೆ ಶಡಾಧಾರ ಪೂಜಾ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಜರುಗಿತು. ದೇವಾಲಯದ ಹೃದಯ ಭಾಗದ ಗರ್ಭಗುಡಿಯ ನಿರ್ಮಾಣಕ್ಕೆ ನೆಲ ಮಟ್ಟದಿಂದ 7.25 ಅಡಿ ಭೂಮಿಯ ಒಳಗಿನಿಂದ ಅಡಿಪಾಯ ಹಾಕಿದ್ದು, ಗರ್ಭಗುಡಿ ಹಾಗೂ ಮುಖ ಮಂಟಪ ಅಡಿಪಾಯಕ್ಕೆ ಉಪ್ಪು ಮಿಶ್ರಿತ ಮರಳು ತುಂಬಿಸುವ ಕಾರ್ಯವನ್ನು ಊರಿನವರು ನೆರವೇರಿಸಿದರು. ಪೂಜೆ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಸ್ಥಾನದ ತಕ್ಕ ಮುಖ್ಯಸ್ಥರಾದ ಕೋಟೆರ ಸುಬ್ಬಯ್ಯ, ನೆರವಂಡ ಭೀಮಯ್ಯ, ಅಧ್ಯಕ್ಷರು ಕೋಟೆರ ಸುಬ್ಬಯ್ಯ, ಉಪಾಧ್ಯಕ್ಷರಾದ ಬೈರುಡ ಮಾಚಯ್ಯ, ಕಾರ್ಯಾಧ್ಯಕ್ಷರು ಮತ್ತು ಖಜಾಂಚಿ ಬೊಟ್ಟೋಳಂಡ ತಿಮ್ಮಯ್ಯ, ಚಂಗೇಟಿರ ಅಪ್ಪಯ್ಯ, ಕಾರ್ಯದರ್ಶಿ ಕೋಟೆರ ಧನುಷ್ ಬೋಪಣ್ಣ, ಮಾಜಿ ಕಾರ್ಯದರ್ಶಿ ಅಪ್ಪಚೆಟ್ಟೊಳಂಡ ರಾಜಭೀಮಯ್ಯ, ತಕ್ಕ ಮುಖ್ಯಸ್ಥರು, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ತಂತ್ರಿ ದಿವಾಕರ್ ಭಟ್, ಮುಖ್ಯ ಅರ್ಚಕ ಪುಟ್ಟ ಅವರ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು.
ವರದಿ : ದುಗ್ಗಳ ಸದಾನಂದ.









