
ಮಡಿಕೇರಿ ಆ.29 NEWS DESK : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕಕ್ಕೆ ಜಿಲ್ಲೆಯ ವಿವಿಧೆಡೆಯ ಪ್ರಮುಖರು ಸ್ವಯಂಪ್ರೇರಿತರಾಗಿ ಸೇರ್ಪಡೆಗೊಂಡರು. ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ನೆಲ, ಜಲ ಹಾಗೂ ಭಾಷೆಯ ಹಿತರಕ್ಷಣೆಗಾಗಿ ಸಂಘಟನೆ ನಡೆಸುತ್ತಿರುವ ಕಾರ್ಯದಿಂದ ಪ್ರೇರಿತರಾಗಿ ಇಸರ್ ಅಹ್ಮದ್, ಮಹಮದ್ ಹನೀಫ್, ಜಗದೀಶ್, ನಿತಿನ್ ಕುಮಾರ್, ಜೈರುದ್ದೀನ್, ಶ್ರೀನಿವಾಸ್, ಆಶಾ, ರವೀಂದ್ರ ಕುಮಾರ್, ಪ್ರಶಾಂತ್, ಮಮದ್ ಶರೀಫ್ ಹಾಗೂ ಕ್ಲಿಫರ್ಡ್ ರಾಡ್ರಿಗಸ್ ಅವರು ಅಧಿಕೃತವಾಗಿ ಸಂಘಟನೆಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರು, ಸ್ವಯಂಪ್ರೇರಿತರಾಗಿ ಸಂಘಟನೆಗೆ ಸೇರ್ಪಡೆಗೊಂಡ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿ ಕನ್ನಡ ನಾಡು-ನುಡಿಯ ಸೇವೆ ಮಾಡುವುದರೊಂದಿಗೆ ನೆಲ, ಜಲ ಹಾಗೂ ಭಾಷೆಯ ರಕ್ಷಣೆಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಹೊಸ ಸದಸ್ಯರ ಸೇರ್ಪಡೆಯಿಂದ ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಸಂಘಟನಾ ಶಕ್ತಿ ಮತ್ತಷ್ಟು ಬಲಗೊಂಡಿದ್ದು, ಮುಂದಿನ ದಿನಗಳಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.










