ಮೂರ್ನಾಡು ಡಿ.17 NEWS DESK : ಶ್ರೀ ಯೋಗಿ ನಾರೇಯಣ ಕೊಡಗು ಜಿಲ್ಲಾ ಬಲಿಜ ಸಂಘದ ವತಿಯಿಂದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮೂರ್ನಾಡು ಶ್ರೀ ಅಯ್ಯಪ್ಪ ದೇವಾಲಯದಲ್ಲಿ ನಡೆಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ ಮೂಲಕ ಕ್ಯಾಲೆಂಡರ್ ಅನ್ನು ಬಲಿಜ ಸಮಾಜದ ಹಿರಿಯರಾದ ಟಿ.ಎಲ್.ಲೋಕನಾಥ್ ಅವರು ಬಿಡುಗಡೆ ಮಾಡಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸರ್ವರಿಗೂ ಅನುಕೂಲವಾಗುವಂತೆ ದೇವರು ಅನುಗ್ರಹಿಸಲಿ. ಬಲಿಜ ಸಮಾಜ ಇನ್ನಷ್ಟು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಆಶಿಸಿದರು. ಕೊಡಗು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಗಣೇಶ್ ನಾಯ್ಡು ಅವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಬಲಿಜ ಸಮೂಹದ ಅಭ್ಯುದಾಯಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುಬ್ರಮಣಿ, ಖಜಾಂಚಿ ಟಿ. ಎ.ಪ್ರಕಾಶ್, ನಿರ್ದೇಶಕರಾದ ಟಿ.ಎಸ್.ರಮಿತಾ, ಯಶ್ವಂತ್ ಕುಮಾರ್ ನಾಯ್ಡು, ಟಿ.ಜಿ.ಹರ್ಷ, ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.











