ಮಡಿಕೇರಿ ಡಿ.17 NEWS DESK : ವಿಧಾನಸಭೆಯ ಅಧಿವೇಶನದಲ್ಲಿ ಭೂಕಂದಾಯ ತಿದ್ದುಪಡಿ ವಿಧೇಯಕವನ್ನು ಮಂಡಿಸುವ ಸಂದರ್ಭ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ‘ಕೊಡವ ಪಟ್ಟೆದಾರರನ್ನು ಏಜೆಂಟರು’ ಎಂದು ಸಂಭೋಧಿಸುವ ಮೂಲಕ ಕೊಡವರನ್ನು ಅವಮಾನಿಸಿದ್ದಾರೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅವರು ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಚಿವರು ತಕ್ಷಣ ಕೊಡವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕೊಡವರ ಒಂದು ಕುಟುಂಬದ (ಒಕ್ಕ) ಹಿರಿಯ ಸದಸ್ಯರನ್ನು ಕೊಡವರು ‘ಪಟ್ಟೆದಾರ’ ಎಂದು ಕರೆಯುತ್ತಾರೆ. ಇದರ ಅರಿವಿಲ್ಲದಿದ್ದರೆ ಸಚಿವರು ಇತಿಹಾಸವನ್ನು ಓದಿ ತಿಳಿದುಕೊಳ್ಳುವುದು ಉತ್ತಮ. ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ‘ಏಜೆಂಟರು’ ಪದ ಬಳಕೆ ಮಾಡುವ ಸಂದರ್ಭ ಕೊಡಗಿನ ಶಾಸಕರು ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಇರುವುದು ಮತ್ತು ಸರಿಯಾದ ಮಾಹಿತಿಯನ್ನು ಒದಗಿಸದೇ ಇರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.











