ಗೋಣಿಕೊಪ್ಪ ಡಿ.20 NEWS DESK : ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಅಮೀನಾ ಎಂ.ಎಂ ಆಯ್ಕೆಯಾಗಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿ ನಚೆನ್ನಂಗೊಲ್ಲಿ ನಿವಾಸಿಯಾಗಿರುವ ಇವರು ಅವಿನಾ ಡ್ರಿಮ್ಸ್ ವಲ್ರ್ಡ್ ಸೇವ ಸಂಸ್ಥೆಯ ಸಂಸ್ಥಾಪಕರಾಗಿದ್ದಾರೆ. ಸರಕಾರಿ ಶಾಲೆಗಳಿಗೆ ಸಿ.ಸಿ.ಕ್ಯಾಮರ ಮತ್ತು ಇನ್ನಿತರ ಪೀಠೋಪಕರಣಗಳ ಅವಶ್ಯಕತೆಯನ್ನು ಪೂರೈಸುವುದರ ಜತೆಗೆ ಸಂಕಷ್ಟದಲ್ಲಿರುವವರ ಸೇವೆಯಲ್ಲಿ ನಿರಂತರಾಗಿ ತೊಡೆಸಿಕೊಂಡಿದ್ದಾರೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ, ಕಾರುಣ್ಯಾಶ್ರಮದ ಸಂಸ್ಥಾಪಕ ಅಮರಯ್ಯ ಸ್ವಾಮಿ ಹಿರೇಮಠ ಹರೇಟನೂರು ಅವರು ಕಾರುಣ್ಯಾಶ್ರಮದ ಕೊಡಗು ಜಿಲ್ಲಾ ಸಂಪರ್ಕಧಿಕಾರಿಯಾಗಿ ನೇಮಕ ಮಾಡಿದ್ದಾರೆ ಎಂದು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಮಾಹಿತಿ ನೀಡಿದ್ದಾರೆ.











