ಗೋಣಿಕೊಪ್ಪ ಡಿ.24 NEWS DESK : ಗೋಣಿಕೊಪ್ಪದ ಕೊಡಗು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಅಮೃತ್‍ರಾಜ್ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆಯ ಶಿವಲಿಂಗೇಶ್ವರ ಕಲ್ಯಾಣ ಮಂದಿರದಲ್ಲಿ ನಡೆದ ಶಿಕ್ಷಣ ಮತ್ತು ಜ್ಞಾನ ಮಾಸಪತ್ರಿಕೆಯ 23ನೇ ವಾರ್ಷಿಕೋತ್ಸವ ಮತ್ತು ರಾಜ್ಯಮಟ್ಟದ ಶಿಕ್ಷಣ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಈ ಸಂದರ್ಭ ಹಾಸನ ಜಿಲ್ಲೆಯ ಪ್ರಮುಖರಾದ ನಾಗರಾಜ್, ರಾಮಚಂದ್ರ, ರವೀಂದ್ರನಾಥ್, ಶ್ರೀಧರ್, ಪ್ರಸನ್ನಕುಮಾರ್, ಲಿಂಗರಾಜು, ಲೋಲಾಕ್ಷಿ, ರುದ್ರಪ್ಪ ಸೇರಿದಂತೆ ಹಲವಾರು ಭಾಗಿಯಾಗಿದ್ದರು. ಈ ಸಂದರ್ಭ ಸುಮಾರು 20ಕ್ಕೂ ಹೆಚ್ಚು ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.











