ಮಡಿಕೇರಿ ಡಿ.26 NEWS DESK : ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ 66/11 ಕೆ.ವಿ ನೂತನ ಬ್ರೇಕರ್‌ಗಳ ನಿರ್ವಾಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಕೇಂದ್ರದಿಂದ ಹೊರಹೊಮ್ಮುವ F1-ನಲ್ಲೂರು, F2-ಬಾಳೆ, F4 ತಿತಿಮತಿ, F5-ಪಾಲಿಬೆಟ್ಟ, F6-ಬೇಗೂರು, F7-ಗೋಣಿಕೊಪ್ಪ, F8-ಪೊನ್ನಂಪೇಟೆ, F9-ಹಾತೂರು, F10-ಹೈಸೊಣ್ಣೂರು, ಫೀಡರ್‌ನಲ್ಲಿ ದಿನಾಂಕ 27.12.2025 ರಂದು ಬೆಳಿಗ್ಗೆ 10.00ರಿಂದ ಸಂಜೆ 4.00 ಗಂಟೆಯವರೆಗೆ ವಿದ್ಯುತ್ ಸರಬರಾಜಾಗುವ ಪೊನ್ನಂಪೇಟೆ, ಗೋಣಿಕೊಪ್ಪ, ತಿತಿಮತಿ, ಹಾತೂರು, ಅರುವತ್ತೋಕ್ಲು, ಕಿರುಗೂರು, ದೇವರಪುರ, ಮಾಯಮುಡಿ ಧನುಗಾಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.










