ಮಡಿಕೇರಿ NEWS DESK ಡಿ.27 : ಕೊಡವ ಹಾಕಿ ಅಕಾಡೆಮಿ ವತಿಯಿಂದ ಮೂರ್ನಾಡಿನ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ’ ಯ ಎರಡನೇ ದಿನದ ಪಂದ್ಯಾಟದಲ್ಲಿ ಚೆಪ್ಪುಡಿರ, ಪರದಂಡ, ಕುಪ್ಪಂಡ ಹಾಗೂ ಕುಲ್ಲೇಟಿರ ಗೆಲುವು ದಾಖಲಿಸಿದವು. ಚೆಪ್ಪುಡಿರ ಮತ್ತು ಮುಕ್ಕಾಟಿರ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡ 9-0 ಗೋಲುಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಚೆಪ್ಪುಡಿರ ಪ್ರಣವ್ ಹಾಗೂ ನರೇನ್ ತಲಾ ಎರಡು, ಸೋಮಣ್ಣ, ಚೇತನ್, ಅಯ್ಯಪ್ಪ, ನಾಚಪ್ಪ, ದಿವನ್ ತಲಾ ಒಂದು ಗೋಲು ಬಾರಿಸಿದರು. ಕೋಣೇರಿರ ಮತ್ತು ಪರದಂಡ ನಡುವಿನ ಪಂದ್ಯದಲ್ಲಿ ಪರದಂಡ ತಂಡ 6-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಪರದಂಡ ಚೆಶ್ವಿನ್ ಹಾಗೂ ರಂಜನ್ ಅಯ್ಯಪ್ಪ ತಲಾ ಎರಡು, ಪ್ರಧಾನ್, ಧೀರಜ್ ಮುತ್ತಣ್ಣ ತಲಾ ಒಂದು ಗೋಲು ದಾಖಲಿಸಿದರು. ಕೂತಂಡ ಮತ್ತು ಕುಪ್ಪಂಡ ನಡುವಿನ ಪಂದ್ಯದಲ್ಲಿ ಕುಪ್ಪಂಡ ತಂಡ 3-2 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಕುಪ್ಪಂಡ ಪರ ಚಂಗಪ್ಪ, ಶ್ಯಾನ್ ಹಾಗೂ ಜಗತ್ ತಲಾ ಒಂದು ಗೋಲು ಬಾರಿಸಿದರು. ಕೂತಂಡ ಪರ ಬೋಪಣ್ಣ ಕೆ.ಸಿ ಎರಡು ಗೋಲು ದಾಖಲಿಸಿದರು. ಕುಲ್ಲೇಟಿರ ಮತ್ತು ಮಾಚಮಾಡ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡ 5-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕುಲ್ಲೇಟಿರ ಮಂದಪ್ಪ ತಲಾ ಎರಡು, ಚಿಟ್ಟಿಯಪ್ಪ, ಮುತ್ತಣ್ಣ ಹಾಗೂ ತಿಮ್ಮಯ್ಯ ತಲಾ ಒಂದು ಗೋಲು ಬಾರಿಸಿದರು.










