ಕುಶಾಲನಗರ ಡಿ.30 NEWS DESK : ಮೈಸೂರು ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ನೀಡಲ್ಪಡುವ ರಾಜ್ಯಮಟ್ಟದ ಚಿನ್ಮಯಿ ಜ್ಞಾನಿ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಕುಶಾಲನಗರ ಪಟ್ಟಣದ ನಾಲ್ಕು ಮಂದಿ ಶಿಕ್ಷಕರಾದ ಎಸ್.ಎಸ್.ವಿರೂಪಾಕ್ಷ ಮತ್ತು ಬಿ.ಬಿ.ಹೇಮಲತಾ ಹಾಗೂ ಕೆ.ಜಿ.ರೇಣುಕಸ್ವಾಮಿ ಮತ್ತು ಕಲಾವತಿ ಭಾಜನರಾಗಿದ್ದಾರೆ. ಫೌಂಡೇಶನ್ ವತಿಯಿಂದ ಮೈಸೂರು ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ
11 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಈ ಶಿಕ್ಷಕರಿಗೆ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು. : ಚಿನ್ಮಯಿ ಶಿಕ್ಷಕ ಪ್ರಶಸ್ತಿ ಪಡೆದವರ ವಿವರ : ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಶಿಕ್ಷಕ ದಂಪತಿಯಾದ ಕುಶಾಲನಗರದ ನಿವಾಸಿಯಾಗಿದ್ದು, ಹೊಳಲ್ಕೆರೆಯ ಎಸ್.ಜೆ.ಎಂ.ವಿದ್ಯಾಸಂಸ್ಥೆಯ ವೃತ್ತಿ ಶಿಕ್ಷಕ ಎಸ್.ಎಸ್.ವಿರೂಪಾಕ್ಷ ಮತ್ತು ಇವರ ಪತ್ನಿಯಾದ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮಿತಿಯ ಸದಸ್ಯರೂ ಕುಶಾಲನಗರ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕಿ ಬಿ.ಬಿ.ಹೇಮಲತಾ ಶಿಕ್ಷಕ ಪ್ರಶಸ್ತಿ ಪಡೆದರು. ಹಾಗೆಯೇ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕ ದಂಪತಿಯಾದ ಕುಶಾಲನಗರ ನಿವಾಸಿಯಾಗಿದ್ದು, ಇದೀಗ ಆವರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ಕೂಡಿಗೆಯ ಕೆ.ಜಿ.ರೇಣುಕಸ್ವಾಮಿ ಮತ್ತು ಅವರ ಪತ್ನಿ, ಕೊಪ್ಪ ಬಳಿಯ ಗುಡ್ಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಐಮಿಕ ಶಾಲೆಯ ಶಿಕ್ಷಕಿಯಾದ ಕಲಾವತಿ ಶಿಕ್ಷಕ ಪ್ರಶಸ್ತಿ ಪಡೆದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವಚನ ಪೌಂಡೇಶನ್ ನ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್ ಹಾಗೂ ಐತಿಯಂಡ ರಮೇಶ್ ಉತ್ತಪ್ಪ ಮತ್ತಿತರರು ಇದ್ದರು. ಈ ಎರಡು ಶಿಕ್ಷಕ ದಂಪತಿಗೆ ರಾಜ್ಯಮಟ್ಟದ ಚಿನ್ಮಯಿ ಜ್ಞಾನಿ ಶಿಕ್ಷಕ ಪ್ರಶಸ್ತಿ ಲಭಿರುವುದಕ್ಕೆ
ಶಿಕ್ಷಕರ ಸಂಘಟನೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.











