ಮಡಿಕೇರಿ ಡಿ.31 NEWS DESK : ಆಂಧ್ರಪ್ರದೇಶದ ಕಡತದಲ್ಲಿ ನಡೆದ ಮೂರನೆಯ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕಿಯರ ವಿಭಾಗದ ಹಾಕಿ ಪಂದ್ಯಾವಳಿಯಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಗ್ರೀಷ್ಮ ಪೊನ್ನಪ್ಪ ಪಿ. ಹಾಗೂ ಚರಿಷ್ಮಾ ಕಾವೇರಮ್ಮ ಸಿ. ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಪೈನಲ್ ನಲ್ಲಿ ಆಂಧ್ರಪ್ರದೇಶದ ವಿರುದ್ದ 2-0 ಗೋಲುಗಳಿಂದ ಜಯಭೇರಿ ಬಾರಿಸುವ ಮೂಲಕ ಕರ್ನಾಟಕಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ.











