ನಾಪೋಕ್ಲು ಡಿ.31 NEWS DESK : ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೊಡಗಿನ ಕ್ರೀಡಾಪಟುಗಳು ಭಾಗವಹಿಸಿ ಗೆಲುವು ಸಾಧಿಸುವುದರ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಕೋಲಾರ ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಕೋಲಾರದಲ್ಲಿ ಜರುಗಿದ 44 ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕೊಡಗಿನ ಕ್ರೀಡಾಪಟುಗಳು ಭಾಗವಹಿಸಿ ಗೆಲುವು ಸಾಧಿಸುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದಲ್ಲಿ ಕೊಡಗಿನ ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾದವರಲ್ಲಿ ನಾಂಗಾಲ, ಬಿಟ್ಟಂಗಾಲಾ, ಚೇಮಿರ ಸೀತಮ್ಮ, ಪ್ರೇಮ ತಟ್ಟೆ ಎಸೆತ ಪ್ರಥಮ, ಗುಂಡು ಎಸೆತ ಪ್ರಥಮ, ಜಾವೆಲಿನ್ ಎಸೆತ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಳೆಲೆಯ ಕೊಟ್ಟಗೇರಿ ಗ್ರಾಮದ ಅರಮಣಮಾಡ ಮಮತಾ ಮನು ಜಾವಲಿನ್ ಎಸೆತದಲ್ಲಿ ಪ್ರಥಮ, ಭಾರದ ಗುಂಡು ಎಸೆತದಲ್ಲಿ ಹಾಗೂ ಹ್ಯಾಮರ್ ಥ್ರೊ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಟಿ ಶೆಟ್ಟಿಗೇರಿಯ ಪೆಮಂಡ ಸಂಭೀತ ಕುಶಾಲಪ್ಪ ಜಾವಲಿನ್ ಮತ್ತು ಡಿಸ್ಕಸ್ ಥ್ರೋ ಎಸೆತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅಚ್ಚಪಂಡ ಟೀನಾ ಸೋಮಣ್ಣ ಉದ್ದ ಜಿಗಿತ ಹ್ಯಾಮರ್ ಥ್ರೊ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೂರೀರ ಶಾಂತಿ ಬೆಳ್ಳಿಯಪ್ಪ ಚಾವಲಿನ ಎಸೆತ ಮತ್ತು ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ ಪಿರಿಯಾಪಟ್ಟಣ ತಾಲೂಕು ಕೋಮಲಾಪುರ ಗ್ರಾಮದ ಆಶಾ ಅನಂತಕುಮಾರ್ ಭಾರದ ಗುಂಡು ಎಸೆತ ಮತ್ತು ಹ್ಯಾಮರ್ ಥ್ರೋ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಂಡೆಯಂಡ ಕಲ್ಪನಾ ಭಾರದ ಗುಂಡು ಎಸೆತ ಮತ್ತು ಜಾವಲಿನ್ ಎಸೆತದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ಪ್ರಥಮಸ್ಥಾನ ಗಳಿಸಿದ್ದಾರೆ. ಮರಗೋಡು ಗ್ರಾಮದ ಹೊಸೋಕ್ಲೂ ಚಿನ್ನಪ್ಪ 5000 ಮೀಟರ್ ಓಟ ಮತ್ತು 800 ಮೀಟರ್ 10,000 ಮೀಟರ್ ಓಟ ಪ್ರಥಮ ಸ್ಥಾನ ಗಳಿಸಿದ್ದಾರೆ. ಚೇಲಾವರ ಗ್ರಾಮದ ಗಗನ್ ಮೇದಪ್ಪ (ಜಿಮ್ಮ) 100 ಮೀಟರ್ ಒಟದ ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.











