ಮಡಿಕೇರಿ ಡಿ.31 NEWS DESK : ಕುಶಾಲನಗರದ ಹೋಟೆಲ್ ಉದ್ಯಮಿ ಅತಿಥಿ ಭಾಸ್ಕರ್ ಅವರು ಅನಾರೋಗ್ಯದಿಂದ ಇಂದು (ಡಿ.31) ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪಾರ್ಥಿವ ಶರೀರ ಮಧ್ಯಾಹ್ನ 3 ಗಂಟೆ ವೇಳೆಗೆ ಕುಶಾಲನಗರ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಹಲವು ವರ್ಷಗಳ ಕಾಲ ಅತಿಥಿ ಹೋಟೆಲ್ ನಡೆಸುತ್ತಿದ್ದ ಭಾಸ್ಕರ್ ಅವರು ನಂತರ ಕುಶಾಲನಗರದ ಪ್ರವೇಶದಲ್ಲಿ ಅತಿಥಿ ರೆಸ್ಟೋರೆಂಟ್ ಆರಂಭ ಮಾಡಿದ್ದರು. ಕ್ರಿಯಾಶೀಲ ಪ್ರವಾಸೋದ್ಯಮಿ ಆಗಿದ್ದ ಭಾಸ್ಕರ್ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್ ನಲ್ಲಿ ಸಕ್ರಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಭಾಸ್ಕರ್ ನಿಧನಕ್ಕೆ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ, ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.











