

ಸೋಮವಾರಪೇಟೆ ಡಿ.31 NEWS DESK : ಪಟ್ಟಣದ ಆಂಜನೇಯ ದೇವಾಲಯ ಸಮೀಪದ ಹೌಸಿಂಗ್ ಬೋರ್ಡ್ ನಿವಾಸಿ ನಿವೃತ್ತ ಇಂಜಿನಿಯರ್ ಕೆ.ಎಸ್.ನಾಗರಾಜ್(90)ಇಂದು (ಡಿ.31) ಸಂಜೆ ನಿಧನರಾಗಿದ್ದಾರೆ. ಮೃತರು ಪತ್ನಿ ಸುನಂದಾ ನಾಗರಾಜ್, ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂದು, ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಜ.1 ರಂದು ಸಂಜೆ 5 ಗಂಟೆಗೆ ಅವರ ಹುಟ್ಟೂರು ಶನಿವಾರಸಂತೆ ಸಮೀಪದ ಕಿತ್ತೂರು ಗ್ರಾಮದಲ್ಲಿ ನಡೆಯಲಿದೆ. ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ಸೋಮವಾರಪೇಟೆ ಹೌಸಿಂಗ್ ಬೋರ್ಡ್ ನಿವಾಸದಲ್ಲಿ ಅಂತಿಮ ದರ್ಶನ ಪಡೆಯಬಹುದಾಗಿದೆ.











