

ವಿರಾಜಪೇಟೆ ಡಿ.31 NEWS DESK : ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ವಲಯದ ಅರ್ವತ್ತೋಕ್ಲು ಕಾರ್ಯ ಕ್ಷೇತ್ರದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಕಾ ಕೇಂದ್ರ (ಟ್ಯೂಷನ್ ಕ್ಲಾಸ್) ಉದ್ಗಾಟನಾ ಕಾರ್ಯಕ್ರಮ ನಡೆಯಿತು. ಶಾಲೆಯ ಪ್ರಭಾರ ಮುಖ್ಯೋಪದ್ಯಾಯರಾದ ರೇವತಿ ಅವರು ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಂದ ಅನೇಕ ಕಾರ್ಯಕ್ರಮಗಳ ಅನುಷ್ಠಾನಗಳು ನಡೆಯುತ್ತಿದ್ದು, ಅದರೊಂದಿಗೆ ಟ್ಯೂಷನ್ ಕ್ಲಾಸ್ ಕೂಡ ಒಂದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡಿರುವುದು ಸಂತೋಷದ ವಿಷಯವಾಗಿದೆ. ಹಾಗೆಯೇ ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ವಲಯದ ಮೇಲ್ವಿಚಾರಕರಾದ ನಾಗರಾಜ್ ಅವರು ಮಕ್ಕಳಿಗೆ ಮಾಹಿತಿ ನೀಡಿ ಶಾಲೆಯಲ್ಲಿ ಕಲಿತಂತ ಪಾಠವನ್ನು ಯಾವತ್ತು ಮರೆಯಲು ಆಗುವುದಿಲ್ಲ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಎಂಬುದರ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಶಿಷ್ಯವೇತನ, ಶಾಲೆಗಳಿಗೆ ಸಲಕರಣೆ ನೀಡುವುದರ ಬಗ್ಗೆ ಹಾಗೂ ಈ ವರ್ಷದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆಯಬೇಕು ಓದುವುದರ ಬಗ್ಗೆ ಹೆಚ್ಚು ಒಲವನ್ನು ನೀಡಬೇಕೆಂದು ಹಿತನುಡಿಗಳನ್ನು ಮಕ್ಕಳಿಗೆ ನೀಡಿದರು. ಕಾರ್ಯಕ್ರಮದಲ್ಲಿ ಸಹಶಿಕ್ಷರರಾದ ಚಂದನ, ವಿದ್ಯಾ, ಸುಮಿ, ಯಡ್ಲಿಸ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಉಷಾರಾಣಿ ಹಾಗೂ ಸೇವಾ ಪ್ರತಿನಿಧಿ ಗೌರಿ, ಭವಾನಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











