

ವಿರಾಜಪೇಟೆ ಡಿ.31 NEWS DESK : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಅಮ್ಮತ್ತಿಯ ಮಾಚಿಮಂಡ ದೇವಯ್ಯ ಮೆಮೋರಿಯಲ್ ಪಬ್ಲಿಕ್ ಸ್ಕೂಲ್‍ನ ವ್ಯವಸ್ಥಾಪಕರು ಹಾಗೂ ಪ್ರಾಂಶುಪಾಲರಾದ ಇಂದು ಗಣಪತಿ ಅಭಿಪ್ರಾಯಪಟ್ಟರು. ಅಮ್ಮತ್ತಿ ಪಟ್ಟಣದ ಮಾಚಿಮಂಡ ದೇವಯ್ಯ ಮೆಮೋರಿಯಲ್ ಪಬ್ಲಿಕ್ ಸ್ಕೂಲ್‍ನ ಸಭಾಂಗಣದಲ್ಲಿ ನಡೆದ ಮೆಗಾ ಕಾರ್ನಿಪೋಪ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ. ಇದರ ಜತೆಯಲ್ಲಿಯೇ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತಿರು ವುದು ಮಕ್ಕಳನ್ನು ಉತ್ತೇಜಿಸಿದಂತಾಗುತ್ತಿದೆ. ಸಾಂಸ್ಕೃತಿಕ ಕಲೆಗಳನ್ನು ಮಕ್ಕಳಿಂದ ಪ್ರದರ್ಶಿಸುವ ಮೂಲಕ ಅವರಿಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಿದಂತಾಗುತ್ತಿದೆ. ಈ ನಿಟ್ಟಿನಲ್ಲಿ ದೇಶೀಯ ಪರಂಪರೆಯನ್ನು ಬಿಂಬಿಸುವ ಕಲೆಗಳು ವಿದ್ಯಾರ್ಥಿಗಳಿಂದ ಮೂಡಿ ಬರಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಆಧುನಿಕ ಯುಗಕ್ಕೆ ಮಾರುಹೋಗುತ್ತಿರುವ ಯುವ ಜನತೆಗೆ ಐತಿಹಾಸಿಕ ವಿಚಾರವನ್ನು ತಿಳಿ ಹೇಳುವ ಅಗತ್ಯ ಇದೆ. ಪಠ್ಯದಲ್ಲಿ ಸಾಮಾಜಿಕ ವಾದ ಎಲ್ಲಾ ವಿಚಾರಗಳನ್ನು ಏಕಕಾಲದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಕಲೆಗಳ ಮುಖೇನಾ ತಿಳಿಸಲು ಸಾಧ್ಯವಿದೆ. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನ, ಪೆÇೀಷಕರ ಹಾಗೂ ಸಾರ್ವಜನಿಕರ ಭಾಗವಹಿಸುವಿಕೆ, ಮತ್ತು ಸಾಧನೆಗಳನ್ನು ಗುರುತಿಸಿ ಗೌರವಿಸುವ ಹಬ್ಬವಾಗಿದ್ದು, ಇದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಬಹುಮಾನ ವಿತರಣೆ, ಮತ್ತು ಸಂಸ್ಥೆಯ ಪ್ರಗತಿಯ ಕುರಿತು ಚರ್ಚೆ ಇರುತ್ತದೆ. ಮಕ್ಕಳಿಗೆ ಇದು ಒಂದು ದೊಡ್ಡ ಹಬ್ಬದ ವಾತಾವರಣ ನೀಡುತ್ತದೆ ಹೇಳಿದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೇ, ಪೋಷಕರಿಗೆ ಬೆಂಕಿರಹಿತ ಅಡುಗೆ ಸ್ಪರ್ಧೆ ಹಾಗೂ ಪ್ಲವರ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದೇ ಸಂದರ್ಭ ವಿವಿಧ ಕ್ರೀಡೆ, ಚಿತ್ರಕಲಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚಿತ್ರಕಲಾ ಸ್ಫರ್ದೆಯ ತೀರ್ಪುಗಾರರಾಗಿ ರೂಪೇಶ್, ಅಡುಗೆ ಸ್ಪರ್ಧೇಯ ತೀರ್ಪುಗಾರರಾಗಿ ಅಮ್ಮತ್ತಿಯ ಜ್ಯೋತಿ ಕಾರ್ಯ ನಿರ್ವಹಿಸಿದರು. ಶಾಲಾ ಆವರಣದಲ್ಲಿ ವಿವಿಧ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟವಿತ್ತು. ವೇದಿಕೆಯಲ್ಲಿ ವಿರಾಜಪೇಟೆಯ ಟೀಮ್ ಇಂಟೋಪೀಸ್ ನೃತ್ಯ ತಂಡದ ವಿಷ್ಣು ಅವರ ಕೊರಿಯೊಗ್ರಾಫ್‍ನಲ್ಲಿ ಮೂಡಿಬಂದ ನೃತ್ಯ ವೈಭವ ಹಾಗೂ ಜಾದೂಗಾರ ರಾಜೇಶ್ ಅವರಿಂದ ವಿವಿಧ ಮ್ಯಾಜಿಕ್ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರುಗಳಾದ ಜಾನ್ಸಿ ತಿಮ್ಮಯ್ಯ, ವಿಮಲ ಮಂದಪ್ಪ, ಕೀರ್ತನ, ನಿಶಾ, ಸುಶಮ್ಮ, ಸೌಫತ್, ದೀಪಿಕಾ, ಕಾವ್ಯ, ಸೇರಿದಂತೆ ಶಾಲಾ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಂದ ಮನಮೋಹಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.











