

ಮಡಿಕೇರಿ ಜ.1 NEWS DESK : ಆಂಧ್ರಪ್ರದೇಶದ ಕಡಪದಲ್ಲಿ ನಡೆದ 3 ನೇ ರಾಷ್ಟ್ರೀಯ ದಕ್ಷಿಣ ವಲಯ ಸಬ್ ಜೂನಿಯರ್ ಮಹಿಳಾ ಹಾಕಿ ಫೈನಲ್ ಪಂದ್ಯಾವಳಿ ಯಲ್ಲಿ ಕರ್ನಾಟಕ ತಂಡವು ಆಂಧ್ರಪ್ರದೇಶ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ. ನಾಯಕಿಯಾಗಿ ಮಡಿಕೇರಿ ಸಾಯಿ ಹಾಸ್ಟೆಲ್ ನ ಪ್ರಿನ್ಸಿಯ ಉಪನಾಯಕಿಯಾಗಿ ತ್ವಿಷ ದೇಚಮ್ಮ ತಂಡವನ್ನು ಮುನ್ನೆಡೆಸಿದರು. ತಂಡದ ವ್ಯವಸ್ತಾಪಕರಾಗಿ ಕೃತಿಕಾ ಹಾಗು ಕೋಚ್ ಆಗಿ ಸುಖಲ್ಯನ್ ಮಂಡಲ್ ಕಾರ್ಯನಿರ್ವಾಹಿಸಿದ್ದರು.











