ಮಡಿಕೇರಿ ಜ.1 NEWS DESK : ಕೊಡಗು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಒಂದೇ ದಿನ ವಿವಿಧೆಡೆಗೆ ವರ್ಗಾವಣೆಗೊಂಡಿದ್ದು, ಇವರ ಸ್ಥಾನಕ್ಕೆ ನೂತನ ಅಧಿಕಾರಿಗಳು ನಿಯುಕ್ತಿಗೊಂಡಿದ್ದಾರೆ. ಜಿಲ್ಲಾಧಿಕಾರಿ ಕೆ.ವೆಂಕಟ್‍ರಾಜಾ ಅವರ ಸ್ಥಾನಕ್ಕೆ ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ವಿಭಾಗದ ಆಯುಕ್ತರಾಗಿದ್ದ ಎಸ್.ಜೆ.ಸೋಮಶೇಖರ್ ನಿಯೋಜನೆಗೊಂಡಿದ್ದಾರೆ. 2023ರಲ್ಲಿ ಕೊಡಗು ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ವೆಂಕಟ್ ರಾಜಾ ಅವರು ಕಳೆದ ಎರಡೂವರೆ ವರ್ಷಗಳಿಂದ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಬೆಂಗಳೂರಿನ ಸರ್ವೆ ಹಾಗೂ ಭೂ ದಾಖಲೆಗಳ ವಿಭಾಗದ ಆಯುಕ್ತರಾಗಿ ವರ್ಗಾವಣೆಯಾಗಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಮೈಸೂರು ನಗರ ಉಪ ಆಯುಕ್ತೆ ಆಗಿದ್ದ ಬಿಂದು ಮಣಿ ನೇಮಕಗೊಂಡಿದ್ದಾರೆ. 2023ರ ಜನವರಿಯಲ್ಲಿ ಎಸ್‍ಪಿಯಾಗಿ ನಿಯುಕ್ತಿಗೊಂಡ ಕೆ.ರಾಮರಾಜನ್ ಅವರು ಬೆಳಗಾವಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ರಾಮರಾಜನ್ ತಮ್ಮ ಕಾರ್ಯಾವಧಿಯಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ತಡೆಯುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದರು.










