ಮಡಿಕೇರಿ NEWS DESK ಜ.1 : ಮಹಾರಾಷ್ಟ್ರದಲ್ಲಿ ನಡೆದ ಆರನೇ ವರ್ಷದ ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ಆರು ಬಾಲಕರು ಹಾಗೂ ನಾಲ್ವರು ಬಾಲಕಿಯರು ಭಾಗವಹಿಸಿ ಪದಕ ಗೆದ್ದಿದ್ದಾರೆ. ಮನ್ವಿತ್ ಮೋಹನ್, ಕೌಶಿಕ್ ಕುಮಾರ್ ಯು.ಸಿ ಹಾಗೂ ಹಫೀಸ್ ಚಿನ್ನದ ಪದಕ ಗೆದ್ದುಕೊಂಡರು. ಯಾಸಿನ್ ವಿ., ವಿಕ್ತ ಚೋಂದಮ್ಮ ಬೆಳ್ಳಿ ಪದಕ, ಶರಣಿ ಎ.ಶೆಟ್ಟಿ, ಸಾತ್ವಿಕ ಬಿ.ಎಸ್, ಸಾಧ್ವಿ ಆನಂದ್, ವೇಣುಗೋಪಾಲ್ ಹಾಗೂ ಸಿಯಾನ್ ಗೌಡ ಕಂಚಿನ ಪದಕ ಪಡೆದರು. ಮಿಕ್ಸ್ ಬಾಕ್ಸಿಂಗ್ ಅಸೋಸಿಯೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ತರಬೇತುದಾರ ಎನ್.ಸಿ.ಸುದರ್ಶನ್ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಬಿ.ಕೆ.ಸತೀಶ್ ಕುಮಾರ್ ಅವರು ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.










