ಮಡಿಕೇರಿ NEWS DESK ಜ.1 : ಕಳೆದ 30 ವರ್ಷಗಳಿಂದ ಕೊಡಗಿನ ಮನೆ ಮಾತಾಗಿರುವ ಮಡಿಕೇರಿಯ ಪ್ರತಿಷ್ಠಿತ ಎಲೆಕ್ಟ್ರಾನಿಕ್ & ಫರ್ನಿಚರ್ ಶೋರೂಮ್ “ವ್ಯಾಂಡಮ್ ಎಂಟರ್ ಪ್ರೈಸಸ್” ಸಂಸ್ಥೆಯ 2026ನೇ ಸಾಲಿನ ಕ್ಯಾಲೆಂಡರ್ ಅನ್ನು ಭವ್ಯವಾಗಿ ಬಿಡುಗಡೆಗೊಳಿಸಲಾಯಿತು. ಈ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವು ಖ್ಯಾತ ಹಿರಿಯ ವಕೀಲರು, ಲೇಖಕರು, ಸಾಹಿತಿಗಳು ಹಾಗೂ ವಿಮರ್ಶಕರಾದ ಕೆ.ಪಿ.ಬಾಲಸುಬ್ರಹ್ಮಣ್ಯ ಹಾಗೂ ಹಿರಿಯರಾದ ಆಶಾ ಬಾಲಸುಬ್ರಹ್ಮಣ್ಯ, ಬೆಂಗಳೂರು ನಗರದ ಪ್ರತಿಷ್ಠಿತ “Tooth Fix” Dental Health Care ಸಂಸ್ಥೆಯ ಡೆಂಟಲ್ ಸರ್ಜನ್ ಡಾ.ಅನಿರುದ್ಧ್ ಕೆ.ಬಿ ಹಾಗೂ ಡೆಂಟಲ್ ಓರಲ್ ಸರ್ಜರಿ ತಜ್ಞೆ ಡಾ.ಪವಿತ್ರಾ ಭಟ್ ಅವರ ಅವರ ಉಪಸ್ಥಿತಿಯಲ್ಲಿ ನಡೆಯಿತು. ವ್ಯಾಂಡಮ್ ಎಂಟರ್ ಪ್ರೈಸಸ್ ನ ಮಾಲೀಕ ಕೆ.ಕೆ.ದಾಮೋದರ್ ಅವರು ಮಾತನಾಡಿ ವ್ಯಾಂಡಮ್ ಎಂಟರ್ ಪ್ರೈಸಸ್ ಸಂಸ್ಥೆಯ ಯಶಸ್ವಿ ಪಯಣಕ್ಕೆ ಇದು ಮತ್ತೊಂದು ಹೆಮ್ಮೆಯ ಕ್ಷಣವಾಗಿದೆ ಎಂದರು.










