ಮಡಿಕೇರಿ ಜ.2 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಮಡಿಕೇರಿಯಲ್ಲಿ ಬಾಕಿ ಉಳಿದಿರುವ ಪ್ರಥಮ ವರ್ಷದ ಬಿ.ಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ-11, ಬಿ.ಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ-20, ಬಿಎಸ್ಸಿ ಆಪ್ಟೋಮೆಟ್ರಿ-20, ಬಿಎಸ್ಸಿ ರೆಸ್‍ಪಿರೆಟರಿ ಕೇರ್ ಟೆಕ್ನಾಲಜಿ-19 ಸೀಟುಗಳನ್ನು ಹಾಗೂ ದ್ವಿತೀಯ ವರ್ಷದ ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ-15, ಬಿಎಸ್ಸಿ ಅನಸ್ತೇಸಿಯಾ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ-11, ಬಿಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ-19, ಬಿಎಸ್ಸಿ ರೆಸ್‍ಪಿರೆಟರಿ ಕೇರ್ ಟೆಕ್ನಾಲಜಿ-20, ಬಿಎಸ್ಸಿ ಆಪ್ಟೋಮೆಟ್ರಿ-18 ಸೀಟುಗಳಿಗೆ ನೇರ ಆಯ್ಕೆ (ವಾಕ್ ಇನ್ ಅಡ್ಮಿಷನ್) ಆಹ್ವಾನಿಸಲಾಗಿದೆ. ಮೆರಿಟ್ ಆಧಾರದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಕೆಇಎ ಹಾಗೂ ಆರ್‍ಜಿಯುಎಚ್‍ಎಸ್ ಮಾನದಂಡಗಳ ಪ್ರವೇಶಾತಿಯ ಅರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿಗೆ ಜನವರಿ, 08 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆ ಒಳಗೆ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇಲ್ಲಿ ಹಾಜರಾಗಿ ನೊಂದಣಿ ಪಡೆದು ಪ್ರವೇಶಾತಿ ಪಡೆಯಬಹುದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಅವರು ತಿಳಿಸಿದ್ದಾರೆ.










