ಕುಶಾಲನಗರ ಜ.2 NEWS DESK : ಸಮಾಜಕ್ಕೆ ಬೇರೆ ಬೇರೆ ಸಂಘ ಸಂಸ್ಥೆಗಳ ಮೂಲಕ ನಿರಂತರ ಸೇವೆ ಸಲ್ಲಿಸಬೇಕೆನ್ನುವ ಅಭಿಲಾಷೆಯನ್ನು ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಮಾಜಿ ಅಧ್ಯಕ್ಷ ಎಸ್.ಕೆ.ಸತೀಶ್ ವ್ಯಕ್ತಪಡಿಸಿದರು. ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಸತೀಶ್ ಅವರ ನಿವಾಸದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುಶಾಲನಗರ ಚೇಂಬರ್ ಈಗಿನ ಆಡಳಿತ ಮಂಡಳಿ ಕೆ.ಎಸ್.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಗೆ ನಾನು ಗೈರಾಗಿದ್ದರು ಮನೆಗೆ ಬಂದು ಈ ರೀತಿಯಲ್ಲಿ ಗೌರವಿಸುವ ಸಂಪ್ರದಾಯ ಖಂಡಿತ ಉತ್ತಮ ಬೆಳವಣಿಗೆ. ಸಂಸ್ಥೆಯಲ್ಲಿ ದುಡಿದ ಎಲ್ಲರನ್ನೂ ಗುರುತಿಸಿ ಈಗಿನ ಜನಸಮೂಹಕ್ಕೆ ಮತ್ತೊಮ್ಮೆ ನಮ್ಮಗಳ ಸೇವೆಯನ್ನು ನೆನಪಿಸಿದ್ದು ಶ್ಲಾಘನೀಯ. ಇನ್ನು ಹೆಚ್ಚಿನ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳಲು ನಾವುಗಳು ಜೊತೆಯಲ್ಲಿ ಇರುತ್ತೇವೆ ಎಂದು ತಿಳಿಸಿದರು. ಕುಶಾಲನಗರ ಚೇಂಬರ್ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಹಿರಿಯರ ಮಾರ್ಗದರ್ಶನ ಸದಾ ಅವಶ್ಯ. ಅವರುಗಳ ಸಲಹೆ, ಸೂಚನೆ ಮೇರೆಗೆ ನಾವು ಸಂಸ್ಥೆಯನ್ನು ಮತ್ತಷ್ಟು ಸದೃಢಗೊಳಿಸಲು ಹೊರಟಿದ್ದೇವೆ. ಕುಶಾಲನಗರ ಭಾಗದ ಎಲ್ಲ ವರ್ತಕರು ಕಡ್ಡಾಯವಾಗಿ ಸದಸ್ಯತ್ವ ಪಡೆಯುವಂತೆ ಆಗಬೇಕು ಎಂದು ಹೇಳಿದರು. ನಿಕಟಪೂರ್ವ ಅಧ್ಯಕ್ಷ ರವೀಂದ್ರ ರೈ, ಉಪಾಧ್ಯಕ್ಷ ಎಂ ಡಿ ರಂಗಸ್ವಾಮಿ, ಕಾರ್ಯದರ್ಶಿ ಚಿತ್ರ ರಮೇಶ್, ಖಾಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಪಿ.ಎಂ.ಮೋಹನ್, ಕೆ.ಎನ್.ದೇವರಾಜ್, ಹೆಚ್.ಎಂ.ಚಂದ್ರು, ಶೋಭಾ ಸತೀಶ್ ಮತ್ತಿತ್ತರು ಹಾಜರಿದ್ದರು.











