ಮಡಿಕೇರಿ ಜ.2 NEWS DESK : ಕೆ ಎಸ್ ಸಿ ಎ ವತಿಯಿಂದ ಮಂಗಳೂರು ವಿಭಾಗದ U -14 ವಲಯ ಮಟ್ಟದ ಕ್ರಿಕೆಟ್ ತಂಡಕ್ಕೆ ನಗರದ ಕೊಡಗು ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಕೆ.ಎಂ.ಆದಿತ್ಯ ಆಯ್ಕೆಯಾಗಿದ್ದಾರೆ. ಕೆ ಎಸ್ ಸಿ ಎ ಲೀಗ್ ಪಂದ್ಯಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಅರ್ಧ ಶತಕ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೆ ಎಸ್ ಸಿ ಎ ಅಂತರ್ ಜಿಲ್ಲಾ ಪಂದ್ಯಗಳಲ್ಲಿಯೂ ಆದಿತ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಅವರನ್ನು ಮಂಗಳೂರು ವಲಯ ಪ್ರತಿನಿಧಿಯಾಗಿ ಆಯ್ಕೆ ಮಾಡಲಾಗಿದೆ. 2026 ರ ಜ.3 ರಿಂದ 15 ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಕೆ ಎಸ್ ಸಿ ಎ U-14 ಅಂತರ್ ವಲಯ(ರಾಜ್ಯಮಟ್ಟದ) ಕ್ರಿಕೆಟ್ ಪಂದ್ಯದಲ್ಲಿ ಮಂಗಳೂರು ವಲಯ ತಂಡವನ್ನು ಪ್ರತಿನಿಧಿಸಲಿರುವ ಆದಿತ್ಯ ಗಾಳಿಬೀಡು ನಿವಾಸಿ, ಪ್ರಸ್ತುತ ಮಡಿಕೇರಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶಿರಸ್ತೇದಾರ್ ಆಗಿರುವ ಕರಕರನ ಮಧುಕರ ಮತ್ತು ಸಬಿತ ದಂಪತಿ ಪುತ್ರ.











