ಮಡಿಕೇರಿ ಜ.2 NEWS DESK : ಮಾದಾಪುರದ ಗೌಸಿಯ ಸ್ವಲಾತ್ ಸಮಿತಿ ವತಿಯಿಂದ ಜ.7 ಮತ್ತು 8 ರಂದು ಧಾರ್ಮಿಕ ಪ್ರಭಾಷಣ ಮತ್ತು ಬಡ ಹೆಣ್ಣು ಮಗಳ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಉಮ್ಮರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಾಪುರದ ಪಂಚಾಯಿತಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ತಾನು ವಹಿಸಿಕೊಂಡಿರುವುದಾಗಿ ತಿಳಿಸಿದರು. ಜ.7 ರಂದು ಸಮೀರ್ ದಾರಿಮಿ ಕೊಲ್ಲಂ ಅವರಿಂದ ಧಾರ್ಮಿಕ ಪ್ರಭಾಷಣ ನಡೆಯಲಿದ್ದು, ಡಿ.8 ರಂದು ಪ್ರವಾದಿಯವರ ಕುಡಿ ಬಾಯಾರ್ ತಂಗಳ್ ನೇತೃತ್ವದಲ್ಲಿ ಬಡ ಹೆಣ್ಣು ಮಗಳ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಾಂಗ್ರೆಸ್ ಅಲ್ಪಸಂಖ್ಯಾ ಅಧ್ಯಕ್ಷ ಹನೀಫ್ ಚೋಕಂಡಳ್ಳಿ, ಮೊಹಿಯ್ಯಿದ್ದೀನ್ ಜುಮಾಮಸೀದಿ ಅಧ್ಯಕ್ಷ ಎ.ಪಿ.ಅಕ್ಬರ್, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಉಮೇಶ್ ಉತ್ತಪ್ಪ, ಜಿ.ಪಂ ಮಾಜಿ ಸದಸ್ಯ ಕೆ.ಎ.ಲತೀಫ್ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ನಾಜೀಮ್, ಕೋಶಾಧಿಕಾರಿ ಎಂ.ಎ.ಅಬ್ದುಲ್ಲ, ಸದಸ್ಯರಾದ ಸಂಶುದ್ದೀನ್, ಸಮ್ಮಾನ್, ಮಾಜಿ ಕಾರ್ಯದರ್ಶಿ ಎಸ್.ಅಬ್ದುಲ್ ನಾಸಿರ್ ಸೀಧಿ ಉಪಸ್ಥಿತರಿದ್ದರು.











