ಮಡಿಕೇರಿ ಜ.2 NEWS DESK : ಮಹಾರಾಷ್ಟ್ರದಲ್ಲಿ ನಡೆದ ಆರನೇ ವರ್ಷದ ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ. ವಿವಿಧ ರಾಜ್ಯಗಳ ನಡುವೆ ನಡೆದ ಪೈಪೋಟಿಯಲ್ಲಿ ಕರ್ನಾಟಕ ತಂಡಕ್ಕೆ 17 ಚಿನ್ನ, 7 ಬೆಳ್ಳಿ ಹಾಗೂ 12 ಕಂಚಿನ ಪದಕ ದೊರೆತ್ತಿದೆ. ಕರ್ನಾಟಕ ರಾಜ್ಯ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಅಧ್ಯಕ್ಷ ಚಂದ್ರು ಡಿ., ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ಹಾಗೂ ತರಬೇತುದಾರ ಆರ್.ಹರೀಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಕೊಡಗಿನ ವಿದ್ಯಾರ್ಥಿಗಳು ಕೂಡ ಪದಕಗಳನ್ನು ಗೆದ್ದಿದ್ದಾರೆ.











