ಮಡಿಕೇರಿ ಜ.2 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2025ನೇ ಸಾಲಿನ ಅರೆಭಾಷೆ ಕಥೆ ಮತ್ತು ಲಲಿತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಇಂತಿದೆ. ಅರೆಭಾಷೆ ಕಥಾ ಸ್ಪರ್ಧೆಯಲ್ಲಿ ಬೈತಡ್ಕ ಜಾನಕಿ ಬೆಳ್ಯಪ್ಪ ಅವರ ‘ಜೀವನ ಬೆಳ್ಕ್ ಕಂಡತ್’ ಪ್ರಥಮ ಬಹುಮಾನ, ಕಾಳೇರಮ್ಮನ ಅಶೋಕ್ ಅವರ ‘ಕುಂಙಣ್ಣನು ಸೋಂಪಣ್ಣನು ಹೂಡಿಕೆ ಎತ್ತ್‍ಗಳ ತಂದ ಕಥೆ’ ದ್ವಿತೀಯ ಬಹುಮಾನ ಹಾಗೂ ಓಂ ಶ್ರೀ ದಯಾನಂದ ಅವರ ‘ನೆಲ್ಲಿಗುಡ್ಡೆ ಇದ್ ನನ್ನ ಜಾಗೆ’ ತೃತೀಯ ಬಹುಮಾನ ಮತ್ತು ಎಡಿಕೇರಿ ವಿಶ್ವನಾಥ ಅವರ ‘ಮಂಜಿ ಮುಸುಕಿದ ದಾರಿನ ನೆನ್ಪುಗ’ ತೃತೀಯ ಬಹುಮಾನ ಪಡೆದುಕೊಂಡಿರುತ್ತಾರೆ. ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಸಂಗೀತ ರವಿರಾಜ್ ರವರ ‘ಭಾಸಣ ಪುರಾಣ’ ಪ್ರಥಮ ಬಹುಮಾನ, ಲೋಹಿತಾಶ್ವ ಕ್ಯೊಂಗಾಜೆ ಅವರ ‘ಜಾಣಿಗಳ ಜಾಲ್’ ದ್ವಿತೀಯ ಬಹುಮಾನ, ಕುಂಭಗೌಡನ ರಂಜಿತ್ ಅವರ ‘ಮಿಂಚು’ ತೃತೀಯ ಬಹುಮಾನ ಹಾಗೂ ಕುಕ್ಕನೂರು ರೇಷ್ಮ ಮನೋಜ್ ಅವರ ‘ಕಾಲಕ್ಕೆ ತಕ್ಕ ಕೋಲ ಕಟ್ಟೊಕು’ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ತಿಳಿಸಿದ್ದಾರೆ.










