ಮಡಿಕೇರಿ ಡಿ.3 NEWS DESK : ಹುಣ್ಣಿಮೆ ಅಂಗವಾಗಿ ನಮಾಮಿ ಕಾವೇರಿ ಬಳಗದ ವತಿಯಿಂದ ಜೀವನದಿ ಕಾವೇರಿಗೆ ಜಿಲ್ಲೆಯ ವಿವಿಧ ನದಿ ಪಾತ್ರದಲ್ಲಿ ಮಹಾ ಆರತಿ ಕಾರ್ಯಕ್ರಮ ನಡೆಯಿತು. ಮಾದಾಪಟ್ಟಣ, ಕೂಡು ಮಂಗಳೂರು, ಕೂಡ್ಲೂರು ಗ್ರಾಮದ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ನದಿ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಯಿತು.











