ಮಡಿಕೇರಿ ಜ.3 NEWS DESK : ಹಿರಿಯ ರಾಜಕರಣಿ ದಿ.ಎ.ಕೆ.ಸುಬ್ಬಯ್ಯ ಅವರ ಪತ್ನಿ ದಿ.ಪೊನ್ನಮ್ಮ ಸುಬ್ಬಯ್ಯ ಅವರ 10ನೇ ಪುಣ್ಯಸ್ಮರಣೆ ಅಂಗವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು, ತಮ್ಮ ತಾಯಿಗೆ ಗೌರವ ನಮನ ಸಲ್ಲಿಸಿದರು. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಾಯಿ ಹಾಗೂ ತಂದೆಯವರ ಸಮಾಧಿ ಬಳಿಗೆ ತೆರಳಿದ ಶಾಸಕರು, ಪುಷ್ಪ ನಮನ ಸಲ್ಲಿಸಿ, ಗೌರವಾರ್ಪಣೆ ಸಲ್ಲಿಸಿ ಪ್ರಾರ್ಥಿಸಿದರು. ಶಾಸಕರ ಸಹೋದರ ದಂಪತಿಗಳಾದ ನರೇನ್ ಕಾರ್ಯಪ್ಪ ಹಾಗೂ ಚಂದಲೇ ಕಾರ್ಯಪ್ಪ, ರವಿ ಸೋಮಯ್ಯ , ಶಾಸಕರ ಚಿಕ್ಕಮ್ಮ ಗಂಗಮ್ಮ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಪಕ್ಷದ ಪ್ರಮುಖರಾದ ಅಜ್ಜಿಕುಟ್ಟಿರ ಗಿರೀಶ್, ಪಮ್ಮು, ಅಣ್ಣಳಮಾಡ ಹರೀಶ್, ಭವೀನ್, ಇಸ್ಮಾಯಿಲ್, ಆಂಟೋನಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.












