
ಮಡಿಕೇರಿ ಜ.5 NEWS DESK : ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಭವನ ಸಂಘಟನೆಯು ಜ.18 ರಂದು ರಜತ ಮಹೋತ್ಸವ ಆಚರಿಸುತ್ತಿದ್ದು, ಈ ಸಂದರ್ಭ ಹಲವು ರಾಜ್ಯಗಳ ಕನ್ನಡ ಹರಿಕಾರರು, ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ವಾಮನ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ. ಪ್ರತಿಷ್ಠಿತ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಶಕ್ತಿಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಅವರನ್ನು ಆಯ್ಕೆ ಮಾಡಲಾಗಿದೆ. ಹಲವು ಪ್ರಶಸ್ತಿಗಳಿಗೆ ಭಾಗಜರಾಗಿರುವ ಬಿ.ಜಿ.ಅನಂತಶಯನ ಅವರನ್ನು ಆಯ್ಕೆ ಮಾಡಲಾಗಿದೆ.
“ಕನ್ನಡ ಪಯಶ್ವಿನಿ” ಅಂತರರಾಜ್ಯ ಪ್ರಶಸ್ತಿಯನ್ನು ಕೊಡಗಿನ ಹಿರಿಯ ಸಾಹಿತಿ, ನಿವೃತ್ತ ಸೇನಾನಿ ಕಿಗ್ಗಾಲು ಗಿರೀಶ್, ಸಾಹಿತಿ ಭಾರಧ್ವಜ್ ಕೆ.ಆನಂದತೀರ್ಥ ಬರಹ ಮತ್ತು ಸಿನಿಆ ಕ್ಷೇತ್ರಗಳಲ್ಲಿ ಪ್ರಶಸ್ತಿಗಳಿಗೆ ಭಾಜನರಾಗಿರುವ ಈರಮಂಡ ಹರಿಣಿ ವಿಜಯ್, ಲೇಖಕಿ, ನಿರೂಪಕಿ, ಪ್ರಾಧ್ಯಾಪಕಿ ಪ್ರತಿಮಾ ರೈ, ಗೌರಮ್ಮ ಪ್ರಶಸ್ತಿ ವಿಜೇತೆ ಸಾಹಿತಿ ಸಂಗೀತ ರವಿರಾಜ್ ಅವರುಗಳಿಗೆ ನೀಡಿ ಗೌರವಿಸಲಾಗುತ್ತಿದೆ. ಜಿಲ್ಲೆಯ ಮಾಧ್ಯಮ ಹಾಗೂ ಇತರ ಕ್ಷೇತ್ರಗಳಲ್ಲಿರುವ ಕಿಶೋರ್ ರೈ ಕತ್ತಲೆಕಾಡು, ಚಂದನ್ ನಂದರಬೆಟ್ಟು, ಯಶೋಧ ಪೇರಿಯಂಡ, ಜಯಂತಿ ರೈ, ದೀಪಕ್ ಪೊನ್ನಪ್ಪ ಮತ್ತು ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು, ಬೊಟ್ಟೋಳಂಡ ನಿವ್ಯ ಅವರುಗಳಿಗೂ ಪ್ರಶಸ್ತಿ ನೀಡುತ್ತಿರುವುದಾಗಿ ವಾಮನ ರಾವ್‍ಬೇಕಲ್ ತಿಳಿಸಿದ್ದಾರೆ.








