ವಿರಾಜಪೇಟೆ ಜ.5 NEWS DESK : ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ಬಿ.ಬಿ.ರವಿನಂದನ್ ಬೋರ್ಕರ್ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಜರ್ನಲಿಸಂ ಹಾಗೂ ಮಾಸ್ ಕಮ್ಯುನಿಕೇಷನ್ ವಿಭಾಗದ ಪ್ರಾಧ್ಯಾಪಕಿ ಪ್ರೊ.ಸಪ್ನಾ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ integrity and Teaching Data Journalisam in Indian Universities: An empirical study of status,challenges and strategies ಎಂಬ ಮಹಾ ಪ್ರಬಂಧದಕ್ಕೆ ಬಿ.ಬಿ.ರವಿನಂದನ್ ಬೋರ್ಕರ್ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಡಾ.ಬಿ. ಬಿ.ರವಿನಂದನ್ ಬೋರ್ಕರ್ ರವರು ಬೆಂಗಳೂರಿನ ಸೆಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ಜರ್ನಲಿಸಂ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಪ್ರಸ್ತುತ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇವರು ವಿರಾಜಪೇಟೆ ಬೇಟೋಳಿ ಗ್ರಾಮದ ನಿವೃತ್ತ ಸೈನಿಕರಾದ ಬಿ.ಎನ್. ಬಾಲಕೃಷ್ಣ ಬೋರ್ಕರ್ ಹಾಗೂ ಸುಲೋಚನ ಬೋರ್ಕರ್ ದಂಪತಿಗಳ ಪುತ್ರ.











