ಮಡಿಕೇರಿ ಜ.6 NEWS DESK : ಸಮರ್ಥ ಕನ್ನಡಿಗರು ಸಂಸ್ಥೆಯ ವತಿಯಿಂದ ಫೆ.1 ರಂದು ಮಡಿಕೇರಿಯ ಲಯನ್ಸ್ ಹಾಲ್ ನಲ್ಲಿ ಮೂರರಿಂದ ಹನ್ನೆರಡು (3- 12) ವರ್ಷದವರೆಗಿನ ಮಕ್ಕಳಿಗೆ ಕಥೆ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಿಗಳು ಸ್ವಚ್ಛ ಕನ್ನಡ ಭಾಷೆಯಲ್ಲಿಯೇ ಕಥೆ ಹೇಳಬೇಕು, ಮೂರು ನಿಮಿಷ ಕಾಲಾವಕಾಶ ನೀಡಲಾಗುವುದು, ಕಥೆಯ ಕೊನೆಗೆ ಕಥೆಯ ನೀತಿಯನ್ನು ಹೇಳಬೇಕು, ವಯಸ್ಸಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್ ತರಬೇಕು, ಮೂರರಿಂದ ಏಳು ವರ್ಷ( 3 – 7 ) ಮತ್ತು ಏಳರಿಂದ ಹನ್ನೆರಡು ವರ್ಷ ( 7 – 12 ) ಎಂದು ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ನಡೆಸಲಾಗುವುದು. ವಿಜೇತರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳ ಜೊತೆಗೆ ಭಾಗವಹಿಸುವ ಎಲ್ಲ ಮಕ್ಕಳಿಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು ಎಂದು ಆಯೋಜರು ತಿಳಿಸಿದ್ದಾರೆ. ಭಾಗವಹಿಸುವ ಮಕ್ಕಳು ಆ ದಿನ ಬೆಳಗ್ಗೆ 9.30ಕ್ಕೆ ಹಾಜರಿರಬೇಕು. ಸ್ಪರ್ಧೆಗೆ ಹೆಸರು ನೋಂದಾಯಿಸಲು ಜ.22 ಕೊನೆ ದಿನ. ನೋಂದಣಿಗಾಗಿ 8762574584 – ಸೌಮ್ಯ ಸಂತೋಷ್, 9686323326- ಪವಿತ್ರಾ ಸಂತೋಷ್ ಸಂಪರ್ಕಿಸಬಹುದಾಗಿದೆ.










