Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*
  • *ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*
  • *ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*
  • *ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*
  • *ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*
  • *ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*
  • *2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*
  • *ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*
  • *ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*
  • *ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕಕ್ಕಬ್ಬೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 26ನೇ ನೂತನ ಶಾಖೆ ಉದ್ಘಾಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕಕ್ಕಬ್ಬೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 26ನೇ ನೂತನ ಶಾಖೆ ಉದ್ಘಾಟನೆ*

ಜನವರಿ 7, 20265 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ನಾಪೋಕ್ಲು ಜ.7 NEWS DESK : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 26ನೇ ನೂತನ ಶಾಖೆ ಕಕ್ಕಬ್ಬೆಯಲ್ಲಿ ಜನ ಸೇವೆಗೆ ಲೋಕಾರ್ಪಣೆಗೊಂಡಿದ್ದು, ಕಕ್ಕಬೆ ವ್ಯಾಪ್ತಿಯ ಗ್ರಾಹಕರು ನೂತನ ಶಾಖೆಯ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಗ್ರಾಹಕರ ಸಹಕಾರದಿಂದ ಕಕ್ಕಬೆ ಶಾಖೆಯು ಕೊಡಗು ಡಿಸಿಸಿ ಬ್ಯಾಂಕಿನ ಅತ್ಯುತ್ತಮ ಶಾಖೆಗಳಲ್ಲಿ ಒಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನ ನಿರ್ದೇಶಕ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಹೇಳಿದರು. ಕಕ್ಕಬ್ಬೆಯಲ್ಲಿ ಆಯೋಜಿಸಲಾಗಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಬ್ಯಾಂಕಿನ 26ನೇ ನೂತನ ಶಾಖೆಯ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಬಳಿಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಫೆ.25 ರ ಮಹಾಶಿವರಾತ್ರಿಯ ಶುಭದಿನದಂದು ಬ್ಯಾಂಕಿನ ಕುಶಾಲನಗರ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಉದ್ಘಾಟಿಸಲಾಗುವುದು. ಮುಂದಿನ 6 ತಿಂಗಳ ಒಳಗೆ 27ನೇ ಶಾಖೆಯನ್ನು ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರುವಿನಲ್ಲಿ ಪ್ರಾರಂಭಿಸಲಾಗುವುದು. ನಂತರ ಪೊನ್ನಂಪೇಟೆ ತಾಲ್ಲೂಕಿನ ಕಾನೂರು, ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು, ಚೆಟ್ಟಳ್ಳಿ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರದಲ್ಲಿ ಮತ್ತಷ್ಟು ಶಾಖೆಗಳನ್ನು ತೆರೆಯಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವನ್ನು ಕೈಗೊಂಡು ಅನುಮತಿಗಾಗಿ ಆರ್‍ಬಿಐ ಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿದೆ. ಈ ಮೂಲಕ ಜಿಲ್ಲಾ ಬ್ಯಾಂಕಿನ ಶಾಖೆಗಳನ್ನು ಜಿಲ್ಲೆಯಾದ್ಯಂತ ತೆರೆದು ಬ್ಯಾಂಕಿಂಗ್ ಸೇವೆಯನ್ನು ಜಿಲ್ಲೆಯ ಜನತೆ ಕೈಗೆಟುಕುವಂತೆ ಮಾಡಲಾಗುವುದು ಎಂದರು. ಸಂಘ ಗ್ರಾಹಕರಿಗೆ ನೀಡುತ್ತಿರುವ ಸೌಲಭ್ಯಗಳು ಹಾಗೂ ದ್ಯೇಯೋದ್ದೇಶಗಳ ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿ 2024-25ನೇ ಸಾಲಿಗೆ ಬ್ಯಾಂಕು ರೂ.1760 ಕೋಟಿಗಳ ಠೇವಣಾತಿ ಸಂಗ್ರಹಣೆಗುರಿಗೆಎದುರಾಗಿ ರೂ.1771 ಕೋಟಿಠೇವಣಿ ಸಂಗ್ರಹಿಸಿದ್ದು, ರೂ.1400 ಕೋಟಿ ಸಾಲ ವಿತರಣೆಗುರಿಗೆಎದುರಾಗಿ ರೂ.1306 ಕೋಟಿ ಸಾಲ ವಿತರಣೆ ಮಾಡಲಾಗಿರುತ್ತದೆ. 31.03.2025ರ ಅಂತ್ಯಕ್ಕೆ ಜಿಲ್ಲೆಯ 23 ವಿವಿಧ ಬ್ಯಾಂಕುಗಳ ಪೈಕಿ ನಮ್ಮ ಬ್ಯಾಂಕು ಠೇವಣಾತಿ ಸಂಗ್ರಹಣೆಯಲ್ಲಿ ಶೇಕಡ ಮೂರನೇ ಸ್ಥಾನ ಹಾಗೂ ಸಾಲ ವಿತರಣೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ಒಟ್ಟಾರೆ ಮಾರುಕಟ್ಟೆ ಶೇರು ಶೇಕಡ 26 ಹೊಂದಿ ಪ್ರಥಮ ಸ್ಥಾನದಲ್ಲಿದ್ದುರಾಜ್ಯ ಮಟ್ಟದಲ್ಲಿ 21 ಡಿ ಸಿ ಸಿ ಬ್ಯಾಂಕುಗಳ ಪೈಕಿ 3 ನೇ ಸ್ಥಾನದಲ್ಲಿದೆ ಎಂದು ಹೇಳಿದರು. 2024-25 ನೇ ಸಾಲಿನ ಬ್ಯಾಂಕಿನ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯ ಪ್ರಕಾರ ರೂ.26.12 ಕೋಟಿ ನಿವ್ವಳ ಆದಾಯದಿಂದರೂ. 9.42 ಕೋಟಿಗಳಷ್ಟು ಮೊತ್ತವನ್ನು ವಿವಿಧ ಶಾಸನಬದ್ಧ ಬಾಬ್ತುಗಳಿಗೆ ಕಾಯ್ದಿರಿಸಲಾಗಿ, ರೂ.16.70 ಕೋಟಿ ನಿವ್ವಳ ಲಾಭ ಗಳಿಸಿರುತ್ತದೆ.ಬ್ಯಾಂಕುಆಡಿಟ್ ವರ್ಗೀಕರಣದಲ್ಲಿ ನಿರಂತರವಾಗಿ“ಎ”ತರಗತಿಯನ್ನುಪಡೆಯುತ್ತಿದ್ದು ವರದಿ ಸಾಲಿನ ಶಾಸನಬದ್ದ ಲೆಕ್ಕಪರಿಶೋಧನೆಯಲ್ಲಿಇದೇ ಮೊದಲ ಬಾರಿಗೆಅತ್ಯಧಿಕ ಶೇಕಡ 96 ಅಂಕಗಳನ್ನು ಪಡೆಯಲಾಗಿರುತ್ತದೆ. 13.08.2025 ರಂದು ನಡೆದ ರಾಜ ಅಪೆಕ್ಸ್ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ನಮ್ಮ ಬ್ಯಾಂಕಿನ ಉತ್ತಮ ಕಾರ್ಯ ಸಾಧನೆಗಾಗಿ 2023-24ನೇ ಸಾಲಿನ ಎ ತರಗತಿ ಆಡಿಟ್ ವರ್ಗೀಕರಣದಲ್ಲಿ ತೃತೀಯ ಬಹುಮಾನಪಡೆದಿರುತ್ತದೆ ಎಂದರು.
ರೈತರ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಆಗಸ್ಟ್ 1ನೇ ತಾರೀಖಿನಿಂದ ಬ್ಯಾಂಕಿನಲ್ಲಿರುವ ಎಲ್ಲಾ ಸಾಲಗಳ ಬಡ್ಡಿದರವನ್ನು ಶೇಕಡ 0.50ರಷ್ಟು ಕಡಿಮೆಗೊಳಿಸಲಾಗಿದ್ದು, ಇದರಿಂದ ಬ್ಯಾಂಕಿಗೆರೂ 3.42 ಕೋಟಿ ನಷ್ಟ ಉಂಟಾಗಲಿದೆ. ವಿಶೇಷವಾಗಿ ಆರ್.ಟಿ.ಸಿ. ಆಧಾರಿತ ಆಭರಣ ಈಡಿನ ಸಾಲದ ಬಡ್ಡಿದರವನ್ನು ಶೇ.8.50 ಕ್ಕೆ ಇಳಿಕೆ ಮಾಡಿದ್ದು, ರಾಜ್ಯದಲ್ಲಿಯೇ ಅತೀ ಕಡಿಮೆ ಬಡ್ಡಿಯಲ್ಲಿ ಆಭರಣ ಸಾಲ ನೀಡುವ ಸಹಕಾರಿ ಬ್ಯಾಂಕು ನಮ್ಮದಾಗಿರುತ್ತದೆ. ವರದಿ ಸಾಲಿಗೆ ಅತ್ಯಧಿಕ ಶೇ.13 ರಷ್ಟು ಡಿವಿಡೆಂಡ್ ಘೋಷಿಸಿದ್ದು, ರಾಜ್ಯದಲ್ಲೇ ಅತ್ಯಂತ ಹೆಚ್ಚು ಡಿವಿಡೆಂಡ್ ಘೋಷಿಸುವ ಬ್ಯಾಂಕು ಕೊಡಗು ಡಿಸಿಸಿ ಬ್ಯಾಂಕು ಆಗಿರುತ್ತದೆ. ಇದು ನಮ್ಮ ಬ್ಯಾಂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಜಿಲ್ಲೆಯ ರೈತರ ಹಾಗೂ ಸಹಕಾರ ಸಂಘಗಳ ಅಭಿವೃದ್ದಿಗೆ ಪೂರಕವಾಗಿ ನಮ್ಮ ಬ್ಯಾಂಕು ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ರೈತರ ಮತ್ತು ಗ್ರಾಹಕರ ಮಕ್ಕಳು ದೇಶ ಮತ್ತು ವಿದೇಶದಲ್ಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅವಶ್ಯವಿರುವ“ವಿದ್ಯಾಸಹಕಾರ”ಹೆಸರಿನ ವಿದ್ಯಾಭ್ಯಾಸ ಸಾಲ ಶೇ.9 ರಲ್ಲಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತರು ಮನೆಗಳನ್ನು ನಿರ್ಮಿಸಲು ಉತ್ತೇಜಿಸುವ ಸಲುವಾಗಿ ಗ್ರಾಮೀಣ ಮನೆ ನಿರ್ಮಾಣ ಸಾಲದ ಮಿತಿಯನ್ನು ಏಕ್ರೆಗೆ 5 ಲಕ್ಷಗಳಿಗೆ ಹೆಚ್ಚಿಸಲಾಗಿರುತ್ತದೆ. ಇತರೆ ಉದ್ದೇಶಕ್ಕಾಗಿ ನೀಡುವ ಸಾಮಾನ್ಯ ಉದ್ದೇಶ ಸಾಲದ ಮಿತಿಯನ್ನುಏಕ್ರೆಗೆ 3 ಲಕ್ಷದವರೆಗೆ ಹೆಚ್ಚಿಸಲಾಗಿದೆ.
ಬ್ಯಾಂಕಿನಗ್ರಾಹಕರಿಗೆ ವಿತರಿಸುತ್ತಿರುವ ವಿವಿಧರೀತಿಯ ಸಾಲಗಳಿಗೆ ಭದ್ರತೆಯನ್ನು ಒದಗಿಸುವ ಸಲುವಾಗಿ ವಿಮಾ ಸಂಸ್ಥೆಯಾದ ಇಂಡಿಯಾ ಫಸ್ಟ್‍ಇನ್ಸುರೆನ್ಸ್ ಕಂಪೆನಿಯೊಂದಿಗೆ ಬ್ಯಾಂಕು ಒಡಂಬಡಿಕೆ ಮಾಡಿಕೊಂಡಿದ್ದು ಸಾಲಗಾರರಿಗೆ ಅಪಘಾತ ಮತ್ತು ಆಕಸ್ಮಿಕ ಮರಣ ಹೊಂದಿದ ಸಂದರ್ಭದಲ್ಲಿ ಪೂರ್ಣ ಮೊತ್ತದ ವಿಮಾ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು. ಬಾಂಕಿನಲ್ಲಿ ಫೋನ್ ಪೇ, ಗೂಗಲ್ ಪೇ, ಮೊಬೈಲ್ ಬ್ಯಾಂಕಿಂಗ್-ಆಪ್ ಮೂಲಕ ಹಣ ವರ್ಗಾವಣೆ, ಡಿ.ಬಿ.ಟಿ. ಎಸ್‍ಎಂಎಸ್ ಮುಂತಾದ ವಿನೂತನ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಲಾಗಿದ್ದು, ಸಾರ್ವಜನಿಕರಂಗದ ಬ್ಯಾಂಕಿಗೆ ಪೈಪೋಟಿ ನೀಡಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕಿನಲ್ಲಿ ಕಿ ಖ ಅoಜe ಸೌಲಭ್ಯವನ್ನು ಸದಸ್ಯ ಸಹಕಾರ ಸಂಘಗಳಿಗೆ ಮೊದಲ ಆದ್ಯತೆಯೊಂದಿಗೆ ನೀಡಲಾಗುತ್ತಿದ್ದು, ಇದರ ಸಂಪೂರ್ಣ ವೆಚ್ವವನ್ನು ಬ್ಯಾಂಕಿನಿಂದ ಭರಿಸಲಾಗುತ್ತದೆ ಎಂದರು. ಕೆಸಿಸಿ ಸಾಲಕ್ಕೆ ಈ ಹಿಂದೆ ನಬಾರ್ಡ್‍ನಿಂದ ಶೇಕಡ 60 ರಷ್ಟು ಪುನರ್‍ಧನ ಬಿಡುಗಡೆಯಾಗುತ್ತಿದ್ದುಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಾಇದ್ದು, ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನಿಂದ 764 ಕೋಟಿ ಕೆ ಸಿ ಸಿ ಸಾಲ ವಿತರಿಸಿದ್ದು ಈ ಪೈಕಿ 119 ಕೋಟಿ ಅಂದರೆ ಶೇ.15 ರಷ್ಟು ಮಾತ್ರ ನಬಾರ್ಡ್‍ನಿಂದ ಬಿಡುಗಡೆಯಾಗಿರುತ್ತದೆ ಎಂದು ಹೇಳಿದರು. ಆರ್ ಬಿ ಐ ಮಾರ್ಗಸೂಚಿಯಂತೆ ಬ್ಯಾಂಕಿನ ಪ್ರತೀ ಶಾಖೆಯಲ್ಲಿಗ್ರಾಹಕರ ಬ್ಯಾಂಕಿನ 24 ಶಾಖೆಗಳಿಗೂ ಬ್ಯಾಂಕಿನಅಧ್ಯಕ್ಷನಾಗಿ ನಾನು ಸ್ಥಳೀಯ ನಿರ್ದೇಶಕರೊಂದಿಗೆ ಹಾಜರಾಗಿಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಸಮರ್ಪಕ ಉತ್ತರಗಳನ್ನು ನೀಡುವ ಮೂಲಕ ಸುಮಾರು 1710 ಗ್ರಾಹಕರನ್ನುಖುದ್ದಾಗಿ ಭೇಟಿ ಮಾಡಲುಅವಕಾಶವಾಗಿರುತ್ತದೆ. ಎಲ್ಲಾ 24 ಶಾಖೆಗಳಲ್ಲಿಯೂ ಬ್ಯಾಂಕಿನಅಧ್ಯಕ್ಷರು ಹಾಗು ಆಡಳಿತ ಮಂಡಳಿಯ ಉತ್ತಮ ಆಡಳಿತ, ಬ್ಯಾಂಕಿನಅಭಿವೃದ್ದಿಯ ಬಗ್ಗೆ ಹಾಗು ಸಿಬ್ಬಂದಿಗಳ ಅತ್ಯುತ್ತಮ ಸೇವೆಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿರುವುದನ್ನು ಸಭೆಗೆ ತಿಳಿಸಲು ಇಚ್ಚಿಸುತ್ತೇನೆ. ಬ್ಯಾಂಕಿನಲ್ಲಿಅಕ್ಟೋಬರ್‍ಅಂತ್ಯಕ್ಕೆ 18 ಎ.ಟಿ.ಯಂ ಯಂತ್ರಗಳು ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ 33 ಸಹಕಾರ ಸಂಘಗಳಿಗೆ ಹಾಗು 24 ಶಾಖೆಗಳಲ್ಲೂ ಮೈಕ್ರೋ. ಎ.ಟಿ.ಯಂ ಗಳನ್ನು ಅನುಷ್ಟಾನಗೊಳಿಸಲಾಗಿರುತ್ತದೆ. ಬ್ಯಾಂಕಿನಲ್ಲಿ ಹಲವಾರು ನೂತನ ಸಾಲಯೋಜನೆಗಳಾದ ಧೀರ್ಘಾವದಿ ಸಾಮಾನ್ಯಉದ್ದೇಶ ಸಾಲ, ಹಳೆಯ ವಾಹನ ಖರೀದಿ ಸಾಲ, ಗ್ರಾಮೀಣ ಮನೆ ಸಾಲ,ಎಲೆಕ್ಟ್ರಿಕಲ್ ವಾಹನ ಖರೀದಿ ಸಾಲ,ವಿಧ್ಯಾಭ್ಯಾಸ ಸಾಲ, ಮನೆ/ ನಿವೇಶನ ಖರೀದಿ ಸಾಲಗಳನ್ನು ಅನುಷ್ಟಾನಗೊಳಿಸಲಾಗಿರುತ್ತದೆ. 2025-26ನೇ ಸಾಲಿನಿಂದ ಸಹಕಾರ ಸಂಘಗಳ ಮೂಲಕ ವಿತರಿಸುತ್ತಿರುವ ಶೂನ್ಯ ಬಡ್ಡಿದರದ ಸಾಲವನ್ನು ನಬಾರ್ಡ್ ಸೂಚಿಸಿರುವ ಇ ಕೆಸಿಸಿ ಪೋರ್ಟಲ್ ಮುಖಾಂತರವೇ ವಿತರಿಸಲು ಸೂಚನೆ ನೀಡಿದ್ದು. ಇದರಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪಾತ್ರವೇನೂ ಇರುವುದಿಲ್ಲ. ಈ ಪೋರ್ಟಲ್ ಮುಖಾಂತರ ಸಾಲ ವಿತರಣೆ ಸಂದರ್ಬ ಸಂಪೂರ್ಣ ಅನ್ ಲೈನ್ ಮುಖಾಂತರವೇ ಸಾಲ ಮಂಜೂರಾತಿಯಾಗುವ ಸಂದರ್ಬ ಸಾಲ ವಿತರಣೆ ಕಾರ್ಯ ವಿಳಂಬವಾಗು ಸಾಧ್ಯತೆ ಇರುವುದಾಗಿ ಸಭೆಯಲ್ಲಿ ತಿಳಿಸಿದರು. 2025-26 ನೇ ಸಾಲಿನಿಂದ ಸಹಕಾರ ಸಂಘಗಳ ಮುಖಾಂತರ ವಿತರಿಸುವ ಶೂನ್ಯ ಬಡ್ಡಿದರದ ಕೆಸಿಸಿ ಸಾಲವನ್ನು ಇ ಕೆಸಿಸಿ ಪೂರ್ಟಲ್ ಮುಖಾಂತರ ವಿತರಿಸಲು ನಬಾರ್ಡ್ ಸೂಚನೆಯನ್ನು ನೀಡಿದ್ದು, ಸಾಲ ಮಂಜೂರಾತಿ ಪ್ರಕ್ರೀಯು ಆನ್‍ಲೈನ್ ಮುಖಾಂತರವೇ ನಡೆಯವುದರಿಂದ ಸಾಲ ವಿತರಣೆ ಕಾರ್ಯ ವಿಳಂಭವಾಗುವ ಸಾಧ್ಯತೆ ಇರುತ್ತದೆ ಇದರಲ್ಲಿ ಡಿಸಿಸಿ ಬ್ಯಾಂಕಿನ ಪಾತ ಇರುವುದಿಲ್ಲ ಎಂದು ಸಭೆಗೆ ತಿಳಿಸಿದರು. ಇತರೆ ಬ್ಯಾಂಕಿಗಳಿಗೆ ಹೋಲಿಸಿದಲ್ಲಿ ಡಿ ಸಿ ಸಿ ಬ್ಯಾಂಕಿನಲ್ಲಿ ಠೇವಣಿಗಳಿಗೆ ಅತ್ಯಂತ ಹೆಚ್ಚು ಬಡ್ಡಿ ನೀಡಲಾಗುತ್ತಿದ್ದು, 50 ಲಕ್ಷ ಮೇಲ್ಪಟ್ಟು ಏಕ ಗಂಟಿನಠೇವಣಿಗೆ 0.35 ಹೆಚ್ಚು ಬಡ್ಡಿ ನೀಡವಯೋಜನೆಯನ್ನು ಜಾರಿಗೆತರಲಾಗಿದೆ. ಅಲ್ಲದೆ ನಮ್ಮ ಬ್ಯಾಂಕಿನಲ್ಲಿ ಲಾಕರ್ ಬಾಡಿಗೆಯೂ ಇತರೆ ಬ್ಯಾಂಕಿಗಿಂತ ಕಡಿಮೆಯಿರುತ್ತದೆ. ಇತರೆ ಸೇವಾ ಶುಲ್ಕವೂ ನಮ್ಮ ಬ್ಯಾಂಕಿನಲ್ಲಿ ಕಡಿಮೆಯಿದ್ದು ಜಿಲ್ಲೆಯ ಜನತೆಗೆ ಉತ್ತಮ ಸೇವೆಯನ್ನು ತ್ವರಿತ ಗತಿಯಲ್ಲಿ ನೀಡುವುದು ನಮ್ಮ ಉದ್ದೇಶವಾಗಿರುತ್ತದೆ ಎಂದರು. ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ಎ.ತಮ್ಮಯ್ಯ ಮಾತನಾಡಿ, ಕಕ್ಕಬ್ಬೆಯಲ್ಲಿ ಬ್ಯಾಂಕಿನ ಶಾಖೆ ತೆರೆದಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು. ನಬಾರ್ಡ್ ನ ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಮುಂಡಂಡ ಸಿ ನಾಣಯ್ಯ ಮಾತನಾಡಿ, ಕೊಡಗಿನಂತಹ ಚಿಕ್ಕ ಜಿಲ್ಲೆಯಲ್ಲಿ ಕೊಡಗು ಡಿಸಿಸಿ ಬ್ಯಾಂಕ್ ಅದ್ಬುತ ಸಾಧನೆ ಮಾಡಿದ್ದು, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಮತ್ತು ಕೊಡಗಿನ ಗ್ರಾಹಕರೇ ಕಾರಣ ಎಂದರು. ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳ್ಳಿಯಲ್ಲಿ ಮೊದಲ ಸಹಕಾರ ಸಂಘವನ್ನು ಶ್ರೀ.ಕುರಾದಗೌಡ್ನ ಮನೆ ಪಿ ದೊಡ್ಡಯ್ಯನವರು ಸ್ಥಾಪಿಸಿದ್ದು, ಇದರ ಸವಿ ನೆನಪಿಗಾಗಿ, ಸದರಿಯವರ ಭಾವಚಿತ್ರವನ್ನು ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ನಾಪೋಕ್ಲು ಕಕ್ಕಬ್ಬೆ ಮತ್ತು ನೆಲಜಿ ಸಹಕಾರ ಸಂಘಗಳಿಗೆ ಈ ಸಾಂಕೇತಿಕವಾಗಿ ವಿತರಿಸಲಾಯಿತು. ನೂತನ ಶಾಖೆಯ ಭಧ್ರತಾ ಕೊಠಡಿಯನ್ನು ಉಪಾಧ್ಯಕ್ಷ ಕೆ.ಎಸ್.ಹರೀಶ್ ಪೂವಯ್ಯ ಉದ್ಘಾಟಿಸಿದರು. ನಗದು ಕೌಂಟರಿನ ಉದ್ಘಾಟನೆಯನ್ನು ಕಲ್ಯಾಟಂಡ ಮುತ್ತಪ್ಪ ನೆರವೇರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ಯು ರಾಬಿನ್ ದೇವಯ್ಯಮಾತನಾಡಿ ಶುಭ ಹಾರೈಸಿದರು, ಈ ಸಂದರ್ಭ ವಿವಿಧ ಸಹಕಾರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚುನಾಯಿತ ಪ್ರತಿನಿಧಿಗಳು, ಸಂಸ್ಥೆಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ನಗಿನ ಮತ್ತು ಗಾಯನ ಪ್ರಾರ್ಥಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ.ಎಸ್. ಹರೀಶ್ ಪೂವಯ್ಯ ಸ್ವಾಗತಿಸಿದರು. ಬ್ಯಾಂಕಿನ ನಿರ್ದೇಶಕರಾದ ಹೊಸೂರು ಜೆ. ಸತೀಶ್ ಕುಮಾರ್ ವಂದಿಸಿದರು.

ವರದಿ : ದುಗ್ಗಳ ಸದಾನಂದ. 

 

Follow us Follow us
Share. WhatsApp Facebook Twitter Email Telegram Copy Link

Related Posts

*ಶ್ರೀಮಂಗಲದಲ್ಲಿ ಪ್ರಜಾಸೇವೆ ಅಭಿಯಾನ; 134ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಶ್ರದ್ಧಾಭಕ್ತಿಯಿಂದ ಜರುಗಿದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ*

ಸೆಪ್ಟೆಂಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಸೆ.26: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಪುನರ್…

*ಈದ್ ಮಿಲಾದ್ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ; ಧರ್ಮವನ್ನು ಪ್ರೀತಿಸಿ, ಇತರ ಧರ್ಮಗಳನ್ನು ಗೌರವಿಸಿ: ರಫೀಕ್ ಮಾಸ್ಟರ್*

ಸೆಪ್ಟೆಂಬರ್ 26, 2026

*ಕೊಡಗಿನ ಶಿಕ್ಷಕರಿಗೆ ಪ್ರತಿಷ್ಠಿತ ‘ವಿದ್ಯಾರತ್ನ’ ರಾಜ್ಯ ಪ್ರಶಸ್ತಿ*

ಸೆಪ್ಟೆಂಬರ್ 26, 2026

*ಶಿಕ್ಷಕರು ನೈತಿಕತೆ, ಮಾನವೀಯ ಮೌಲ್ಯ ಬೆಳೆಸಬೇಕು: ಮದನ್ ಮಾದಯ್ಯ; ಸುಂಟಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ; ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ದಂಪತಿಗೆ ಸನ್ಮಾನ*

ಸೆಪ್ಟೆಂಬರ್ 26, 2026

*ಕ್ರೀಡಾ ಕ್ಷೇತ್ರದಲ್ಲಿ ಆಂಜೆಲಾ ವಿದ್ಯಾನಿಕೇತನದ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ; ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ*

ಸೆಪ್ಟೆಂಬರ್ 26, 2026

*2030ಕ್ಕೆ ಭಾರತವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿ: ಕೊಡಗಿಗೆ ಕೇಂದ್ರ ತನಿಖಾ ತಂಡ ಭೇಟಿ*

ಸೆಪ್ಟೆಂಬರ್ 26, 2026

*ಶ್ರೀಮಂಗಲ-ನಾಲ್ಕೇರಿ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ*

ಸೆಪ್ಟೆಂಬರ್ 26, 2026

*ಮಾಸ್ಟರ್ಸ್ ಅಥ್ಲೆಟಿಕ್ಸ್ ಮೀಟ್ 2026ರಲ್ಲಿ ಕೊಡಗಿನ ಕ್ರೀಡಾಪಟುಗಳ ಮಿಂಚಿನ ಸಾಧನೆ*

ಸೆಪ್ಟೆಂಬರ್ 26, 2026

*ಮಹಿಳಾ ಸ್ವಾವಲಂಬನೆಗೆ ‘ಆತ್ಮ’ ಯೋಜನೆ ಆಸರೆ: ನಾಪೋಕ್ಲು ಮಹಿಳಾ ಸಮಾಜದಿಂದ ಅಣಬೆ ಕಟಾವು*

ಸೆಪ್ಟೆಂಬರ್ 26, 2026

*36 ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆ ದೇವಮಾಜಿ, ಶಿಕ್ಷಕಿ ಭೋಜಮ್ಮಗೆ ಆತ್ಮೀಯ ಬೀಳ್ಕೊಡುಗೆ*

ಸೆಪ್ಟೆಂಬರ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.