
ಮಡಿಕೇರಿ ಜ.7 NEWS DESK : ಬೆಳಗಾವಿಯ ಹಾರೋಗೇರಿ ಆಜೂರ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಆಜೂರ ಪ್ರಶಸ್ತಿಗೆ ಮಡಿಕೇರಿಯ ಬರಹಗಾರ್ತಿ ಕೆ.ಜಯಲಕ್ಷ್ಮಿ ಅವರು ರಚಿಸಿರುವ ‘ಮತ್ತೆ ವಸಂತ’ ಕಥಾ ಸಂಕಲನ ಆಯ್ಕೆಯಾಗಿದೆ. ಜ.15 ರಂದು ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ‘ಮತ್ತೆ ವಸಂತ’ ಕಥಾ ಸಂಕಲನ 2024 ರಲ್ಲಿ ಪ್ರಕಟಗೊಂಡಿತ್ತು. ಜಯಲಕ್ಷ್ಮಿ ಅವರು ಮಡಿಕೇರಿಯ ಸಂತ ಜೋಸೆಫರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮಡಿಕೇರಿಯ ಜೀವ ವಿಮಾ ನಿಗಮದ ಉದ್ಯೋಗಿ ವಿ.ಹೆಚ್.ಜಯಕುಮಾರ್ ಅವರ ಪತ್ನಿ.









