
ನಾಪೋಕ್ಲು ಜ.31 : NEWS DESK : ಸಂಪಾಜೆ ಗ್ರಾಮದ ಪೆಲ್ತಡ್ಕ, ಗೂನಡ್ಕದ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ರಾತ್ರಿ ವೇಳೆ ಕೃಷಿ ತೋಟಕ್ಕೆ ನುಗ್ಗಿ ಬೆಳೆಗಳನ್ನು ನಾಶ ಪಡಿಸಿದ ಘಟನೆ ಸಂಭವಿಸಿದೆ. ಗೂನಡ್ಕದ ಪ್ರಮೀಳ ಅವರ ಮನೆಯ ಮುಂಭಾಗದಲ್ಲಿ ಕಾಡಾನೆ ಹಿಂಡು ಕಾಣಿಸಿಕೊಂಡಿದೆ. ಭಯಗೊಂಡ ಮನೆಯವರು ಸಿಡಿಮದ್ದು ಸಿಡಿಸಿ(ಹೊಡಿಸಿ) ಆನೆಗಳನ್ನು ಓಡಿಸಿದ್ದಾರೆ. ನಂತರ ಕಾಡಾನೆ ಹಿಂಡು ತೋಟಕ್ಕೆ ನುಗ್ಗಿ, ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಹಾನಿಮಾಡಿದೆ. ಅಲ್ಲದೆ ಅಕ್ಕ ಪಕ್ಕದ ನಿವಾಸಿಗಳಾದ ಗಣೇಶ, ಜಗನ್ನಾಥ, ವಸಂತ, ಮನಮೋಹನ ಅವರ ತೋಟಕ್ಕೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ. ಕಾಡಾನೆ ದಾಂಧಲೆಯಿಂದ ಈ ವ್ಯಾಪ್ತಿಯ ಕೃಷಿಕರು ಆತಂಕಕ್ಕೆ ಒಳಗಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಆನೆ ಹಾವಳಿಯನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು ಮತ್ತು ಹಾನಿಗೊಳಗಾದವರಿಗೆ ನಷ್ಟ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









