
ಸುಂಟಿಕೊಪ್ಪ ಜ.31 NEWS DESK : ಕೊಡಗು ಜಿಲ್ಲಾ ಮರ ಕೆಲಸ ಹಾಗೂ ತಲೆ ಹೊರೆ ಸಂಘದ 2026-27ನೇ ಸಾಲಿನ ಅಧ್ಯಕ್ಷರಾಗಿ ಆರ್.ಕೆ.ಹರೀಶ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ.ಕುಟ್ಟಪ್ಪ ಅವರುಗಳನ್ನು ಪುನರಾಯ್ಕೆ ಮಾಡಲಾಯಿತು. ಸಂಘದ ಕಚೇರಿ ಆವರಣದಲ್ಲಿ ನಡೆಸಲಾದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ರಮೇಶ್, ಸಹಕಾರ್ಯದರ್ಶಿಯಾಗಿ ಕೆ.ವಿಜಯ್, ಖಜಾಂಚಿಯಾಗಿ ಅಜೀತ್‍ಕುಮಾರ್, ಗೌರವ ಅಧ್ಯಕ್ಷರಾಗಿ ಟಿ.ಪಿ.ಮುತ್ತಯ್ಯ, ಸಮಿತಿ ಸದಸ್ಯರುಗಳಾಗಿ ಸತೀಶ, ಕುಂಞಕುಟ್ಟಿ, ರಾಧಕೃಷ್ಣ, ಬಾಪ್ಪುಟಿ, ಮುಸ್ತಾಫ, ಹಾಗೂ ಅಮನ್ ಅವರುಗಳನ್ನು ಆಯ್ಕೆಗೊಳಿಸಲಾಯಿತು.









