
ಮಡಿಕೇರಿ NEWS DESK ಫೆ.4 : ಐಗೂರಿನಲ್ಲಿ ನಡೆಯುವ ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಸಮಾರೋಪ ಸಮಾರಂಭದಲ್ಲಿ ದತ್ತಿ ದಾನಿಗಳಾದ ಹೆಚ್.ಬಿ.ಜಯಮ್ಮ ಶನಿವಾರಸಂತೆ, ಸ್ನೇಹಾ ಬಸಮ್ಮ ಕೊಡ್ಲಿಪೇಟೆ,ಎಸ್.ಪಿ. ಪ್ರಸನ್ನ ಸೋಮವಾರಪೇಟೆ, ಜೆ.ಸಿ. ಶೇಖರ್ ಅವರನ್ನು ಸನ್ಮಾನಿಸಲಾಗುತ್ತದೆ. ಸಮಾಜ ಸೇವೆಯಲ್ಲಿ ಶಾರದ ಮಂದಣ್ಣ, ಕೆ.ಪಿ.ಚಂದ್ರಕಲಾ, ಎ.ಆರ್.ಮುತ್ತಣ್ಣ, ಎಸ್.ಎಂ.ಚಂಗಪ್ಪ, ಡಿ.ಎಸ್.ನಿರ್ವಾಣಪ್ಪ, ಕೇಶವಮೂರ್ತಿ, ಶಿಕ್ಷಣ ಕ್ಷೇತ್ರದಲ್ಲಿ ಪಿ.ಕೆ.ಸೋಮಯ್ಯ, ಡಾ.ಕೆ.ಎ. ಮುಸ್ತಾಪ, ಕುಮಾರಿ ತಾನ್ಯ ಮುರಳೀಧರ್, ಕು.ಮನ್ವಿತ್ ಮೋಹನ್ ಎಂ., ವೈದ್ಯಕೀಯ ಕ್ಷೇತ್ರದಲ್ಲಿ ಎಸ್.ಎಂ.ಡಿಸಿಲ್ವಾ, ಡಾ.ಸತ್ತಾರ್ ಖಾನ್, ಡಾ.ಮೋನಿಶ್, ಜೇನುಕುರುಬರ ಸೀತಜ್ಜಿ, ಕೆ.ಪಿ.ಪಾರ್ವತಿ, ರಜಿನ, ಸಹಕಾರ ಕ್ಷೇತ್ರದಲ್ಲಿ ಜಯೇಂದ್ರ ಬಿ.ಇ., ಶ್ರೀಜಿತ್ ವಿ.ಕೆ., ದರ್ಶನ್ ಕೆ.ಎಂ. ಕೃಷಿ ಕ್ಷೇತ್ರದಲ್ಲಿ ಕೆ.ಪಿ.ದಿನೇಶ್, ಸೃಜನ್ ಬಿ.ಎಂ., ರಕ್ಷಣಾ ಕ್ಷೇತ್ರದಲ್ಲಿ ಅಂತೋಣಿ ಡಿಸೋಜ, ಲಿಂಗರಾಜು, ಮೊಗಪ್ಪ ಆರ್.ಎನ್., ಹುತಾತ್ಮ ಪಳಂಗೋಟು ದಿವಿನ್, ಕ್ರೀಡಾ ಕ್ಷೇತ್ರದಲ್ಲಿ ಕೆ.ಪಿ.ರಾಯ್, ಕು.ಕೌಶಿಕ್ ಯು.ಸಿ., ಪತ್ರಿಕಾ ಕ್ಷೇತ್ರದಲ್ಲಿ ಡಿ.ಪಿ. ಲೋಕೇಶ್, ವಿಜಯ್ ಹಾನಗಲ್, ಸುಕುಮಾರ್ ಎಂ.ಎ., ಸಾರ್ವಜನಿಕ ಕ್ಷೇತ್ರದಲ್ಲಿ ಆನಂದ ಪೂಜಾರಿ, ರವಿ, ತೆಕ್ಕಡೆ ಜನಾರ್ಧನ, ಸುನಂದ ರಾಮು, ಶ್ರೀ ಹೆಚ್.ಎಂ. ಸೋಮಪ್ಪ ಅವರನ್ನು ಸನ್ಮಾನಿಸಲಾಗುತ್ತದೆ.









