Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»Uncategorized»ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ರ ಕಾರ್ಯಕ್ರಮದಲ್ಲಿ.
Uncategorized ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಪ್ರಸ್ತುತ ಸಮಾಜದಲ್ಲಿ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡುವ ಜವಾಬ್ದಾರಿ ಪೋಷಕರ ಮೇಲಿದೆ : ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್. ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ರ ಕಾರ್ಯಕ್ರಮದಲ್ಲಿ.

ಫೆಬ್ರವರಿ 9, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ವಿರಾಜಪೇಟೆ NEWS DESK ಫೆ.9: ಮಕ್ಕಳಿಗೆ ಮಹನೀಯರ ಆದರ್ಶವನ್ನು ನೀಡಿ ಉತ್ತಮ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ವಿರಾಜಪೇಟೆ ಡಿವೈಎಸ್ ಪಿ ಮಹೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು . ವಿರಾಜಪೇಟೆ ಮಗ್ಗುಲ ಗ್ರಾಮದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವತಿಯಿಂದ ಆಯೋಜಿಸಲಾದ ಸ್ಪೋರ್ಟ್ಸ್ ಸ್ಪೆಕ್ಟ್ರಾ 2026 ಕಾರ್ಯಕ್ರಮವು ನಾಂಗಾಲ ಗ್ರಾಮದಲ್ಲಿರುವ ಎಲ್. ಎಸ್. ಎ. ಯ ನೂತನ ಕ್ಯಾಂಪಸ್ ನಲ್ಲಿ ಜರುಗಿತು. ಕ್ರೀಡಾ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‌ಪಿ ಮಹೇಶ್ ಕುಮಾರ್ ಪ್ರಸ್ತುತ ನಾವು ಪ್ರತಿಷ್ಠೆಯ ಶಿಕ್ಷಣ ವ್ಯವಸ್ಥೆಯಲ್ಲಿದ್ದೇವೆ . ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಕೇವಲ ಪಠ್ಯದ ಶಿಕ್ಷಣವನ್ನು ನೀಡಿದರೆ ಸಾಲದು. ಅದರೊಂದಿಗೆ ಸಾತ್ವಿಕ ಶಿಕ್ಷಣವನ್ನು ನೀಡುವಂತಹ ಜವಾಬ್ದಾರಿಯು ಪೋಷಕರ ಮೇಲಿದೆ. ನಮ್ಮ ಸಮಾಜದ ಮೂಲ, ಸಂಪ್ರದಾಯ, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ ,ಇತರರಿಗೆ ತೊಂದರೆಯನ್ನು ನೀಡದಿರುವಂತಹ ರೀತಿ ಬದುಕುವುದನ್ನು ಮಕ್ಕಳಿಗೆ ಕಲಿಸಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಗಣನೀಯವಾಗಿ ಹೆಚ್ಚುತಿದ್ದು ಇದರಿಂದಾಗುವ ದುಷ್ಪರಿಣಾಮಗಳನ್ನು ಅರಿತಿರುವ ಪೋಷಕರು ಆದಷ್ಟು ಮಕ್ಕಳನ್ನು ಮೊಬೈಲ್ ಚಟದಿಂದ ದೂರ ಮಾಡಲು ಪ್ರಯತ್ನಿಸುವುದರೊಂದಿಗೆ ಭಾರತದ ಮಹಾನ್ ನಾಯಕರನ್ನು ಆದರ್ಶ ಪ್ರಾಯವಾಗಿ ತೆಗೆದುಕೊಂಡು ತಾವು ಕೂಡ ಮಹನೀಯರಾಗುವ ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಬೇಕು ಎಂದರು . ಕಾರ್ಯಕ್ರಮಕ್ಕೆ ಆಗಮಿಸಿದ ಮತ್ತೋರ್ವ ಅತಿಥಿಗಳಾದ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಕಚಂಡ ಪ್ರಸನ್ನ ಸುಬ್ಬಯ್ಯ ಮಾತನಾಡಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯು ವಿದ್ಯಾರ್ಥಿ ಗಳಿಗೆ ಕೇವಲ ಶಿಕ್ಷಣ ವನ್ನು ಮಾತ್ರ ನೀಡುತ್ತಿಲ್ಲ .ಅದರೊಂದಿಗೆ ಜೀವನ ಕೌಶಲ್ಯಗಳನ್ನು ಕಲಿಸುವತ್ತ ಗಮನ ಹರಿಸುತ್ತಿರುವುದು ಪ್ರಸಂಶನೀಯ . ಶಿಕ್ಷಣ ಸಂಸ್ಥೆಯು ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಮಕ್ಕಳಲ್ಲಿ ಸಮಾಜ ಸೇವೆಯ ಮನೋಭಾವವನ್ನು ಬಾಲ್ಯದಿಂದಲೇ ಬೆಳೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು . ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಪಟ್ಟಡ ಸತೀಶ್ , ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ , ಸಜೇಶ್ ಭರತನ್ , ಕಾರ್ಯದರ್ಶಿ ಪ್ರತಿಮಾ , ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ತರಗತಿವಾರು ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಕ್ರೀಡಾ ಸ್ಪರ್ಧೆಗಳ ಫೈನಲ್ ಪಂದ್ಯಾವಳಿಯನ್ನು ನಡೆಸಲಾಯಿತು. ಪೋಷಕರು ಹಾಗೂ ಶಿಕ್ಷಕರ ತಂಡಗಳ ನಡುವೆ ಥ್ರೋ ಬಾಲ್ ಸೌಹಾರ್ದ ಪಂದ್ಯ ನಡೆಯಿತು. ಕರಾಟೆ ವಿದ್ಯಾರ್ಥಿಗಳು ಕೆಲವು ಸಾಹಸ ಜಲಕ್ ಪ್ರದರ್ಶಿಸಿದರು. ಕ್ರೀಡಾ ದಿನಾಚರಣೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ರವರು ಕ್ರೀಡಾ ಪಟುಗಳಿಗೆ ಶುಭಕೋರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ವಿದ್ಯಾ ಸಂಸ್ಥೆಗಳನ್ನು ಆರಂಭಿಸಲು ವಿಶೇಷವಾದ ಆಸಕ್ತಿ ಇರಬೇಕು. ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುವುದು ಪುಣ್ಯದ ಕೆಲಸ .ವಿದ್ಯಾರ್ಥಿಗಳಲ್ಲಿ ಕ್ರೀಡೆ ಮತ್ತು ಶಿಸ್ತು ಬಹಳ ಅವಶ್ಯಕವಾಗಿದ್ದು ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದರೊಂದಿಗೆ ದೇಶದ ಭವಿಷ್ಯವನ್ನು ರೂಪಿಸಲು ಕ್ರೀಡೆ, ಶಿಸ್ತು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುವುದರಿಂದ ಒಳ್ಳೆಯ ನಾಗರಿಕರನ್ನು ಸೃಷ್ಟಿಸುವಂತಹ ಮಹತ್ತರ ಜವಾಬ್ದಾರಿ ಶಾಲೆಯಿಂದಲೇ ಆರಂಭವಾಗಬೇಕೆಂದರು . ಮೈಸೂರಿನ ಸೂರಜ್ ಪವರ್ ಬ್ಯಾಂಡ್ ವತಿಯಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸ್ಪೋರ್ಟ್ಸ್ ಸ್ಪೆಕ್ಟ್ರಾದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ ದಕ್ಷಿಣ ಭಾರತದ ಚಲನ ಚಿತ್ರ ನಟಿ ಶ್ವೇತಾ ಶ್ರೀವಾತ್ಸವ್ ಮಾತನಾಡಿ ಪೋಷಕರು ತಮ್ಮ ಮಕ್ಕಳ ಆಸಕ್ತ ಕ್ಷೇತ್ರವನ್ನು ತಿಳಿದುಕೊಂಡು ಆ ಕ್ಷೇತ್ರದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕು. ಕ್ರೀಡೆ, ಸಾಂಸ್ಕೃತಿಕ, ಕಲೆ, ಸಮಾಜ ಸೇವೆ ಯಾವುದರಲ್ಲಿ ಮಕ್ಕಳಿಗೆ ಆಸಕ್ತಿ ಇದೆಯೋ ಆ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ನಿರ್ಧರಿಸುವ ಹಾದಿಯನ್ನು ಕಂಡುಕೊಳ್ಳಲು ಸದಾ ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಯಾವುದೇ ಸ್ಪರ್ಧೆ ಆದರು ಸಹ ಬಹುಮಾನ ದೊರೆಯದಿದ್ದರೂ ಅದರಲ್ಲಿ ಪಾಲ್ಗೊಳ್ಳುವಿಕೆ ಬಹಳ ಮುಖ್ಯ. ಇದರೊಂದಿಗೆ ಬೇರೆಯವರ ಯಶಸ್ಸನ್ನು ಕಂಡು ಸಂಭ್ರಮಿಸುವ ಉತ್ತಮ ಗುಣವನ್ನು ಬಾಲ್ಯದಿಂದಲೇ ಮಕ್ಕಳು ರೂಢಿಸಿಕೊಳ್ಳಬೇಕೆಂದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿ ಗಳಿಗೆ ತರಗತಿವಾರು ನಡೆಸಲಾದ ವಿವಿಧ ಕ್ರೀಡಾ ಚಟುವಟಿಕೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು .ಈ ಸಂದರ್ಭದಲ್ಲಿ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಪೂಜಾ ಸಜೇಶ್ , ಸಜೇಶ್ ಭರತನ್ , ಕಾರ್ಯದರ್ಶಿ ಪ್ರತಿಮಾ , ಮುಖ್ಯ ಶಿಕ್ಷಕರಾದ ಮೀರ ಪೂಣಚ್ಚ, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ಅ.16ರಂದು ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ; 118 ಕವಿಗಳಿಂದ ಕವನ ವಾಚನ; ಜೆನ್ ಜಿ ಹಾಗೂ ಮಕ್ಕಳ ಕವಿಗೋಷ್ಠಿ ವಿಶೇಷ ಆಕರ್ಷಣೆ

ಅಕ್ಟೋಬರ್ 15, 2026

ಕೊಡಗಿನಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಗೆ ಅವಕಾಶ ನೀಡಬಾರದು: ರಾಕೇಶ್ ದೇವಯ್ಯ ; ಎಸ್‌ಐಆರ್ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಗೆ ಶಾಸಕರ ಬೆಂಬಲವಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಆಗ್ರಹ

ಅಕ್ಟೋಬರ್ 15, 2026

ಕಡಗದಾಳು ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭ

ಅಕ್ಟೋಬರ್ 15, 2026

ಕೊಡಗಿನಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಅಶಾಂತಿಗೆ ಅವಕಾಶ ನೀಡಬಾರದು: ರಾಕೇಶ್ ದೇವಯ್ಯ ; ಎಸ್‌ಐಆರ್ ಪರಿಷ್ಕರಣೆ ವಿರುದ್ಧದ ಪ್ರತಿಭಟನೆಗೆ ಶಾಸಕರ ಬೆಂಬಲವಿದೆಯೇ ಎಂಬುದನ್ನು ಸ್ಪಷ್ಟಪಡಿಸಲು ಆಗ್ರಹ

ಅಕ್ಟೋಬರ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ. 15: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಕೊಡಗು ಜಿಲ್ಲೆಯಲ್ಲಿ ಪ್ರತಿಭಟನೆ…

ಕಡಗದಾಳು ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭ

ಅಕ್ಟೋಬರ್ 15, 2026

ಎಸ್.ಐ.ಆರ್. ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ಮಡಿಕೇರಿಯಲ್ಲಿ ಪ್ರತಿಭಟನೆ; ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಅಕ್ಟೋಬರ್ 15, 2026

ಸುಂಟಿಕೊಪ್ಪ ಮಲಯಾಳಿ ಸಮಾಜದ 19ನೇ ವರ್ಷದ ಓಣಂ ಆಚರಣೆ; ಸಮಾಜದ ಒಗ್ಗಟ್ಟು ಮತ್ತು ಸಂಘಟನೆ ಎಲ್ಲರಿಗೂ ಮಾದರಿ: ಶಾಸಕ ಡಾ. ಮಂತರ್ ಗೌಡ

ಅಕ್ಟೋಬರ್ 15, 2026

ಸುಂಟಿಕೊಪ್ಪದಲ್ಲಿ ಮಲಯಾಳಿ ಸಮಾಜದಿಂದ 19ನೇ ವರ್ಷದ ಓಣಂ ಆಚರಣೆ

ಅಕ್ಟೋಬರ್ 15, 2026

ಹೊಸತೋಟದಲ್ಲಿ ರಕ್ತದಾನ ಶಿಬಿರ: 30 ಮಂದಿ ರಕ್ತದಾನ

ಅಕ್ಟೋಬರ್ 15, 2026

ಮೂನಾಡ್ ನಲ್ಲಿ ಸಿಎನ್‌ಸಿ ಕೊಡವ ಜನಜಾಗೃತಿ ಮಾನವ ಸರಪಳಿ : 100 ವರ್ಷಗಳಾದರೂ ಕೊಡವ ಲ್ಯಾಂಡ್ ಸಾಧಿಸಲು ಬದ್ಧರಾಗಿದ್ದೇವೆ : ಎನ್.ಯು.ನಾಚಪ್ಪ ಪ್ರತಿಪಾದನೆ

ಅಕ್ಟೋಬರ್ 15, 2026

ಅ.16ರಂದು ಮಕ್ಕಳ ದಸರಾ ಸಂಭ್ರಮ – ಮಕ್ಕಳಿಂದ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಕೊಡ್ಲಿಪೇಟೆಯಲ್ಲಿ ಅ.17ರಂದು ಕಾವೇರಿ ಆರತಿ, ಬಾಗಿನ ಅರ್ಪಣೆ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆಗೆ ಪೂರ್ವಸಿದ್ಧತೆ; ಡಿಸೆಂಬರ್ 22ರಂದು ಹನುಮ ಜಯಂತಿ ಆಚರಣೆ; ದಶಮಂಟಪಗಳ ಸಮಿತಿಯಿಂದ ಸಿದ್ಧತೆ

ಅಕ್ಟೋಬರ್ 15, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.