ಮಡಿಕೇರಿ, NEWS DESK ಫೆ.24:-ಕೇಂದ್ರ ಸರ್ಕಾರದ ಸವಲತ್ತುಗಳನ್ನು ಪಡೆಯಲು ಈಗಾಗಲೇ ರೈತರು ಇ-ಕೆವೈಸಿ ಯನ್ನು ಮಾಡಿಸಿ ಫ್ರೂಟ್ಸ್ ಐಡಿ ಮುಖಾಂತರ ಸವಲತ್ತುಗಳನ್ನು ಪಡೆಯುತ್ತಿರುತ್ತಾರೆ, ಆದರೆ ಈ ರೈತ ಬಾಂಧವರಿಗೆ ಕೇಂದ್ರ ಸರ್ಕಾರವು ಏಕೀಕೃತ ಫ್ರೂಟ್ಸ್ ಐಡಿ ಗಳನ್ನು ಸೃಜನೆ ಮಾಡುತ್ತಿದ್ದು ಸದರಿ ಫ್ರೂಟ್ಸ್ ಐಡಿ ಗಳನ್ನು ಕೇಂದ್ರ ಸರ್ಕಾರದ ಆ್ಯಪ್‍ನೊಂದಿಗೆ ಹೊಂದಾಣಿಕೆ ಮಾಡಲಾಗುವುದು.
ಆದ್ದರಿಂದ ರೈತರು ತಮ್ಮ ಹೆಸರಿಗಿರುವ ಎಲ್ಲಾ ಸರ್ವೆ ನಂಬರ್‍ವಾರು ವಿಸ್ತೀರ್ಣದ ಮಾಹಿತಿಯನ್ನು ಫ್ರೂಟ್ಸ್ ಐಡಿ ಯಲ್ಲಿ ಸೇರಿಸುವುದು. ಫ್ರೂಟ್ಸ್ ಐಡಿ ಸೃಜಿಸುವ ಸಂಬಂದ ರೈತರು ಡಿಜಿಟಲ್ ಕನ್‍ಸೆಂಟ್ ನೀಡಬೇಕಾಗಿದ್ದು ತಮ್ಮ ಮೊಬೈಲ್‍ಗೆ ಬರುವ ಒಟಿಪಿ ಯನ್ನು ರೈತ ಸಂಪರ್ಕ ಕೇಂದ್ರ, ತೋಟಕಾರಿಕೆ, ಪಶು ಸಂಗೋಪನ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರದ ಕಚೇರಿಗಳಿಗೆ ಭೇಟಿ ನೀಡಿ ನೊಂದಾಯಿಸಿಕೊಳ್ಳಬಹುದಾಗಿದೆ. ಫ್ರೂಟ್ಸ್ ಐಡಿ ಇಲ್ಲದ ರೈತರು ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಪಹಣೀಯೋಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‍ಎಸ್‍ಸಿ ಸಂಖ್ಯೆ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್ ನೊಂದಿಗೆ ಈ ಕಚೇರಿಗಳಿಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಬೇಕಾಗಿ ಈ ಮೂಲಕ ತಿಳಿಸಿದೆ. ಈಗಾಗಲೇ ಫ್ರೂಟ್ಸ್ ಐಡಿ ಇರುವ ರೈತರು ನಿಮ್ಮ ಹೆಸರಿಗಿರುವ ಬಾಕಿ ಯಾವುದಾದರು ಜಮೀನಿನ ಸರ್ವೆನಂಬರ್ ಮಾಹಿತಿಯನ್ನು ಫ್ರೂಟ್ಸ್ ಐಡಿ ಯಲ್ಲಿ ಸೇರಿಸಿಕೊಳ್ಳಲು ಅವಕಾಶವಿರುತ್ತದೆ.
ಕೇಂದ್ರ ಸರ್ಕಾರದ ಯಾವುದೇ ಸವಲತ್ತುಗಳನ್ನು ಪಡೆಯಲು ಡಿಜಿಟಲ್ ಕನ್ಸೆಂಟ್ ಕಡ್ಡಾಯವಾಗಿರುತ್ತದೆ, ಆದ್ದರಿಂದ ಜಿಲ್ಲೆಯ ರೈತರು ಫೆಬ್ರವರಿ, 25 ರ ಒಳಗೆ ಸಂಬಂದಿಸಿದ ಕಚೇರಿಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
Breaking News
- *ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*
- *ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*
- *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*
- *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*
- *ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
- *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
- *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
- *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
- *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
- *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*







