
ಮಡಿಕೇರಿ ಮಾ.11 NEWS DESK : ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಸಾಯಿ ಹಾಕಿ ತರಬೇತಿ ಕೇಂದ್ರದ ಸಹಯೋಗದಲ್ಲಿ ಫಿಟ್ ಇಂಡಿಯಾ ಪರಿಕಲ್ಪನೆಯೊಂದಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಮಡಿಕೇರಿ ತಾಲೂಕಿನ ಐದು ಕಾಲೇಜುಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪಂದ್ಯಾವಳಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ತಂಡವು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಯಿ ಹಾಕಿ ತರಬೇತಿ ಕೇಂದ್ರ ಮಡಿಕೇರಿಯ ತರಬೇತಿದಾರರು ಮತ್ತು ಉಸ್ತುವಾರಿಯಾದ ಮಿನಿ ಉನ್ನಿ ರಾಜ್ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಮೇಜರ್ ರಾಘವ ಬಿ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ತಿಪ್ಪೇಸ್ವಾಮಿ, ಭಾರತ ಹಾಕಿ ತಂಡದ ಕ್ಯಾಂಪರ್ ಅಕ್ಷತಾ, ಕಿಲೋ ಇಂಡಿಯಾ ಹಾಕಿ ತಂಡದ ಆಟಗಾರ್ತಿಯರಾದ ಸೀಮಾ ಆನಂದ್ ಪವರ್ ಹಾಗೂ ಗಧೇಲಾ ಗಾಯತ್ರಿ ಉಪಸ್ಥಿತರಿದ್ದರು.
ವರದಿ : ಅಶೋಕ್ ಮಡಿಕೇರಿ









