
ಸುಂಟಿಕೊಪ್ಪ NEWS DESK ಮಾ.15: ಸುಂಟಿಕೊಪ್ಪದಲ್ಲಿ ನಡೆಸಲು ಉದ್ದೇಶಲಾಗಿರುವ ಕೊಡಗು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕುರಿತಾದ ಪೂರ್ವಬಾವಿ ಸಭೆಯನ್ನು ಖಾಸಗಿ ಹೋಟೆಲ್‌ವೊಂದರ ಸಭಾಂಗಣದಲ್ಲಿ ನಡೆಸಲಾಯಿತು. ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಎಂ.ಕೆ.ವಾಸು ರೈ, ಕುಶಾಲನಗರ ತಾಲೂಕು ಕಸಾಪದ ಸಂಘಟನಾ ಕಾರ್ಯದರ್ಶಿ ಗುಡ್ಡೆಮನೆ ಹರೀಶ್, ನಿರ್ದೇಶಕರಾದ ಬಿ.ಸಿ.ದಿನೇಶ್ ಕಸಾಪದ ಹಿರಿಯ ಸದಸ್ಯರುಗಳಾದ ಲೀಲಾಮೇದಪ್ಪ, ಕೆ.ಪಿ.ಜಗನ್ನಾಥ್,ಸುಂಟಿಕೊಪ್ಪ ಹೋ.ಕಸಾಪ ನಿಕಟಪೂರ್ವ ಅಧ್ಯಕ್ಷ ವಹೀದ್‌ಜಾನ್ ಮತ್ತಿತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಸಮ್ಮೇಳನ ನಡೆಸುವ ಕುರಿತು ವಿಸೃತವಾದ ಚರ್ಚೆ ವಿವಿಧ ಉಪಸಮಿತಿಗಳ ರಚನೆ ಹಾಗೂ ಇನ್ನಿತರ ವಿಷಯ ಕುರಿತು ಚರ್ಚಿಸಲು ಮಾ.24 ರ ಮಂಗಳವಾರದoದು ಪೂರ್ವಬಾವಿ ಸಭೆಯನ್ನು ಸುಂಟಿಕೊಪ್ಪ ಕೊಡವ ಸಮಾಜ ಸಭಾಂಗಣದಲ್ಲಿ ನಡೆಸಲು ತಿರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಕಸಾಪದ ಹಿರಿಯ ಸದಸ್ಯ ಬಿ.ಸಿ.ದಿನೇಶ್ ಅವರನ್ನು ಕೊಡಗು ಜಿಲ್ಲಾ ಕಸಾಪ ವತಿಯಿಂದ ಅಭಿನಂದಿಸಲಾಯಿತು. ಮೊದಲಿಗೆ ಸುಂಟಕೊಪ್ಪ ಹೋ.ಕಸಾಪ ಕಾರ್ಯದರ್ಶಿ ಕೆ.ಎಸ್.ಅನಿಲ್‌ಕುಮಾರ್ ಸ್ವಾಗತಿಸಿದರು ಕೊಡಗು ಕಸಾಪದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಡಗು ಕಸಾಪ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಜಿಲ್ಲಾ ಸಾಹಿತ್ಯ ಸಮ್ಮೇಳನದ ರೂಪುರೇಷಗಳ ವಿಸೃತವಾದ ಮಾಹಿತಿ ನೀಡಿದರು. ಕೊನೆಯಲ್ಲಿ ಪಿ.ಎಫ್.ಸಬಾಸ್ಟಿನ್ ವಂದಿಸಿದರು.








